Bangalore: ಸಿದ್ಧಗಂಗಾ ಶ್ರೀಗಳಿಗೆ ಸನ್ಮಾನ
Friday, January 19, 2024
ಬೆಂಗಳೂರು: ಶುಕ್ರವಾರ ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ಧಗಂಗಾ ಶ್ರೀಗಳಿಗೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಪರವಾಗಿ ಅವರ ಪಾದಕಮಲಗಳಿಗೆ ನಮಸ್ಕರಿಸಿ, ಸನ್ಮಾಸಿ ಗೌರವಿಸಲಾಯಿತು.
ಅತಿಥಿ ಉಪನ್ಯಾಸಕರ ಅಭಿನಂದನಾ ಸಮಾರಂಭದ ಕುರಿತು ಸುದೀರ್ಘವಾಗಿ ಚರ್ಚಿಸಿದ ಬಳಿಕ ದಿನಾಂಕವನ್ನು ನಿಗದಿಪಡಿಸಿ ಶುಭ ಹಾರೈಸಿದರು. ನಂತರ ಶ್ರೀಗಳವರಿಂದ ಆಶೀರ್ವಾದ ಪಡೆಯಲಾಯಿತು
ಡಾ. ನಾಗೇಂದ್ರ ಕುಮಾರ್ ಡಿ.ಎನ್., ಡಾ. ನಾರಾಯಣಸ್ವಮಿ, ಶಂಕರ, ಡಾ. ಫೀಟರ್ ವಿನೋದ್ ಚೆಂದ, ಡಾ. ಹನುಮಂತ ಗೌಡ ಆರ್. ಕಲ್ಮನಿ ಉಪಸ್ಥಿತರಿದ್ದರು.




