Mangalore: ಫೆ.11: ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ 17ನೇ ಚೈತನ್ಯ ಸಹಕಾರಿ ಸಂಘದ 8ನೇ ವಾರ್ಷಿಕೋತ್ಸವ
ಮಂಗಳೂರು: ಫೆಬ್ರವರಿ 11 ರಂದು ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ 17ನೇ ವರ್ಷ ಹಾಗೂ ಚೈತನ್ಯ ಸಹಕಾರಿ ಸಂಘದ 8ನೇ ವಾರ್ಷಿಕೋತ್ಸವ ಸಮಭ್ರಮಾಚರಣೆ ಬೆಳಿಗ್ಗೆ 10 ಗಂಟೆಗೆ ಉರ್ವಸ್ಟೋರ್ನಲ್ಲಿರು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾ ವಕ್ತಾರ ರಾಮ್ಕುಮಾರ್ ತಿಳಿಸಿದರು.
ಅವರು ಜ.27 ರಂದು ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಎಘುನಾಥ್ ಅತ್ತಾವರ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯನ್ನು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್, ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕರುಗಳಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಪಿಸಿಸಿಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಕಾರ್ಪೊರೇಟರ್ ಮನೋಜ್ ಕುಮಾರ್ ಕೋಡಿಕಲ್, ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ. ಸೋಮಪ್ಪ, ಗೌರವಾಧ್ಯಕ್ಷ ಬಿ. ಶಂಕರ್, ಕಾರ್ಯಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್, ಗೌರವ ಸಲಹೆಗಾರ ಶೇಖರ್ ಬಳ್ಳಾಲ್ಬಾಗ್, ದ.ಕ. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ ಬಿ. ಭಾಗವಹಿಸಲಿದ್ದಾರೆ.
ಈ ಸಮದರ್ಭದಲ್ಲಿ ಸಮುದಾಯದಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು ಎಂದ ಅವರು ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದರು.
ಪ್ರಮುಖರಾದ ಆನಂದ್ ಅತ್ತಾವರ, ರಘುರಾಮ್ ಅತ್ತಾವರ, ಶಂಕರ್, ಜಯಪ್ರಕಾಶ್ ಪಿ.ವಿ. ಉಪಸ್ಥಿತರಿದ್ದರು.