Mangalore: ಫೆ.11: ಮಂಗಳೂರಿನಲ್ಲಿ ಬಿ.ಕೆ. ಶಿವಾನಿ ಪ್ರವಚನ
ಮಂಗಳೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗ ಶಿಕ್ಷಕಿ, ಅಂತಾರಾಷ್ಟ್ರೀಯ ಪ್ರೇರಣಾದಾಯಕ ಪ್ರವಚನಕಾರರು ಮತ್ತು ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತ ಬ್ರಹ್ಮಕುಮಾರಿ ಬಿ.ಕೆ. ಶಿವಾನಿ ಅವರ ಪ್ರವಚನ ಕಾರ್ಯಕ್ರಮವನ್ನು ಫೆ.11 ರಂದು ಮಂಗಳೂರಿನ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಅಂದು ಪೂರ್ವಾಹ್ನ 10.30 ರಿಂದ ಮಧ್ಯಾಹ್ನ 1ಗಂಟೆಯವರೆಗೆ ಪ್ರವಚನ ನಡೆಯಲಿದೆ. ಬಿ.ಕೆ ಶಿವಾನಿ ಅವರು ‘ಸರಳತೆ ಮತ್ತು ಅನುಗ್ರಹಯುಕ್ತ ಜೀವನ ಜೀವಿಸುವ ಕಲೆ’ಯ ಬಗ್ಗೆ ಅವರು ಪ್ರವಚನ ನೀಡಲಿದ್ದಾರೆ. ಭಾಗವಹಿಸುವ ಮಂದಿಗೆ ನೋಂದಣಿ ಕಡ್ಡಾಯವಾಗಿದ್ದು, ಈಗಾಗಲೇ ೭೦೦ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು ಕೇಂದ್ರದ ಬಿ.ಕೆ. ವಿಶ್ವೇಶ್ವರಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು ಕೇಂದ್ರದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿವಾನಿ ಅವರು ೨೦೧೦ ಮತ್ತು ೨೦೨೦ರಲ್ಲಿ ಮಂಗಳೂರಿನಲ್ಲಿ ಪ್ರವಚನ ಕೈಗೊಂಡಿದ್ದರು. ಮಂಗಳೂರಿನ ಬಹುಜನತೆಯ ಕೋರಿಕೆಯ ಮೇರೆಗೆ ಮೂರನೇ ಬಾರಿಗೆ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಪ್ರವೇಶ ಉಚಿತವಾಗಿದೆ. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾಗಲು eಠಿಠಿmo://oಛ್ಟಿqಜ್ಚಿಛಿo.ಚ್ಟಿZeಞZhಞZಜಿo.ಟಞ/ಟ್ಟಞ/೧೨೨೧೫ ಲಿಂಕ್ ಮೂಲಕ ನೋಂದಣಿ ಮಾಡಬೇಕಾಗಿರುತ್ತದೆ. ಸ್ವ-ಇಮೈಲ್ ಐಡಿ ಹಾಕುವುದು ಕಡ್ಡಾಯ ಒಂದು ವೇಳೆ ಇ-ಮೇಲ್ ಇಲ್ಲದಿದ್ದರೆ ಆ ಜಾಗದಲ್ಲಿ ಟಞZಜ್ಝಿಃಜಞZಜ್ಝಿ.ಟಞ ಅಳವಡಿಸಿ. ಬಳಿಕ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಉರ್ವಸ್ಟೋರ್ ನಲ್ಲಿರುವ ಕೇಂದ್ರದಿಂದ ಪ್ರವೇಶ ಪತ್ರವನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 9742366999, 9916699911 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಬಿ.ಕೆವಿಶ್ವೇಶ್ವರಿ ಅವರು ತಿಳಿಸಿದರು.
ಬ್ರಹ್ಮಕುಮಾರಿಯರಾದ ರೇವತಿ, ಜಯಶ್ರೀ, ಸ್ನೇಹಾ, ಅಂಬಿಕಾ ಉಪಸ್ಥಿತರಿದ್ದರು.