Mangalore: ರಸ್ತೆ ಅಗಲೀಕರಣ ಹಾಗೂ ನಾಗರಿಕ ಸೇವಾ ಸಮಿತಿಯ ಉದ್ಘಾಟನೆ

Mangalore: ರಸ್ತೆ ಅಗಲೀಕರಣ ಹಾಗೂ ನಾಗರಿಕ ಸೇವಾ ಸಮಿತಿಯ ಉದ್ಘಾಟನೆ


 ಮಂಗಳೂರು: ಗುಂಡಳಿಕೆಯ ಒಳ ರಸ್ತೆಯ ಅಗಲೀಕರಣ ಹಾಗೂ ಗುಂಡಳಿಕೆ ನಾಗರಿಕ ಸೇವಾ ಸಮಿತಿಯ ನೂತನ ಕಟ್ಟಡವನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. 

ಈ ಕಾಮಗಾರಿಗಳಿಗೆ ಒಟ್ಟು 65 ಲಕ್ಷ ರೂ. ಮೊತ್ತದ ವಿಶೇಷ ಅನುದಾನ ಒದಗಿಸಿಕೊಟ್ಟ ಶಾಸಕರಿಗೆ ಹಾಗೂ ಇದಕ್ಕೆ ಸಹಕರಿಸಿದ ಮ.ನ.ಪಾ ಸದಸ್ಯೆ ಶಕೀಲಾ ಕಾವ ಅವರಿಗೆ ಸ್ಥಳೀಯ ನಾಗರಿಕರು ಅಭಿನಂದನೆಗಳನ್ನು ಸಲ್ಲಿಸಿದರು. 

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಆದಿಶಕ್ತಿ ಗುಡಿ ಶೀನ ಪೂಜಾರಿ, ವಿಜಯ್ ಶೆಣೈ, ಜಾಗರಣ ವೇದಿಕೆ ಕಿಶೋರ್ ಕುಮಾರ್, ಕಮಲಾಕ್ಷಿ, ಉದಯಶೆಟ್ಟಿ, ಅಮಿತ್ ಗುಂಡಳಿಕೆ, ಪ್ರವೀಣ್, ಹರೀಶ್, ನಾಗಲಕ್ಷ್ಮಿ, ಕೀರ್ತನಾ, ಚೇತನಾ ನರೇಂದ್ರ, ಪವಿತ್ರ, ವಸಂತ್, ಜಯಪ್ರದ, ಯಶೋಧ, ಶರತ್ ಕುಮಾರ್, ಪ್ರಮೀಳಾ, ನವೀನ್, ರಾಜನ್, ಗಾಯತ್ರಿ, ಸವಿತಾ, ಸುನಿಲ್ ಕುಮಾರ್, ರೋಶನಿ, ಶಿಲ್ಪ, ಉಮಾ, ವೇದಾವತಿ, ಹೇಮಾ, ಶ್ರಾವ್ಯ, ನಿರ್ಮಲ, ಗುಲಾಬಿ, ಬೇಬಿ, ರಮ್ಯಾ, ಭಾಸ್ಕರ್, ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article