Mulki: ಬೃಹತ್ ಜಾನುವಾರು ಮೇಳ ಹಾಗೂ ತುಳು ಜಾನಪದ ಕ್ರೀಡೋತ್ಸವ
ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಕಾಂತಾಬಾರೆ ಬುದಾಬಾರೆ ಜೋಡುಕರೆ ಕಂಬಳ ಉತ್ಸವದ ಪ್ರಯುಕ್ತ ವಿವಿಧ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಜಾನುವಾರು ಮೇಳ ಹಾಗೂ ತುಳು ಜಾನಪದ ಕ್ರೀಡೋತ್ಸವವು ಐಕಳ ಬಾವದ ಕಂಬಳ ಮಂಜೊಟ್ಟಿ ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಂಘದ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಯಿಂದ ಗ್ರಾಮೀಣ ಪ್ರದೇಶ ರಾಮ ರಾಜ್ಯವಾಗುವುದರ ಜೊತೆಗೆ ಸಂಸ್ಕೃತಿ, ಸಮೃದ್ಧ ಪ್ರಕೃತಿ ಉಳಿಯುವಿಕೆ ಸಾಧ್ಯ, ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ಹಳ್ಳಿಯಲ್ಲಿ ಕುಟುಂಬದ ಬಂಧುತ್ವ ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ವಹಿಸಿ ಮಾತನಾಡಿ, ಗೋವು ಕಾಮಧೇನುವಾಗಿದ್ದು ಹೈನುಗಾರಿಕೆಗೆ ಹಾಗೂ ಜನಪದ ಕ್ರೀಡೋತ್ಸವಕ್ಕೆ ಗ್ರಾಮಸ್ಥರ ಅಭೂತಪೂರ್ವ ಬೆಂಬಲ ಅಭಿನಂದನೀಯ ಎಂದು ಹೇಳಿದರು.
ಏಳಿಂಜೆ ದೇವಸ್ಥಾನದ ಅರ್ಚಕ ವೈ.ವಿ. ಗಣೇಶ್ ಭಟ್, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಿಥುನ್ ರೈ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕೃಷಿ ವಿಜ್ಞಾನಿ ಡಾ. ಶಿವಕುಮಾರ್, ಐಕಳ ಗ್ರಾ.ಪಂ. ಉಪಾಧ್ಯಕ್ಷ ಜಯಲಕ್ಷ್ಮಿ ಪೂಜಾರಿ, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಪಟ್ಟೆ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಉಷಾ ಅಶೋಕ್ ಶೆಟ್ಟಿ, ಬಳ್ಕುಂಜೆ ಗ್ರಾ.ಪಂ. ಅಧ್ಯಕ್ಷೆ ಮಮತಾ ಪೂಂಜ, ದ.ಕ. ಹಾಲು ಉತ್ಪಾದಕ ಒಕ್ಕೂಟದ ಮಹಾಪ್ರಬಂಧಕ ಡಾ. ರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ವಾದಿರಾಜ ಶೆಟ್ಟಿ, ಡಾ. ವಿಶ್ವರಾಧ್ಯ ಕಂಬಳ ಸಮಿತಿಯ ಚಿತ್ತರಂಜನ್ ಭಂಡಾರಿ, ಸ್ವರಾಜ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ದೇವಿದಾಸ್ ಶೆಟ್ಟಿ ಕಿನ್ನಿಗೋಳಿ, ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ಸಾಯಿನಾಥ ಶೆಟ್ಟಿ ಮುಂಡ್ಕೂರು ನಿರೂಪಿಸಿದರು.
ಬಳಿಕ ಬೃಹತ್ ಜಾನುವಾರ ಮೇಳ ಹಾಗೂ ತುಳು ಜನಪದ ಕ್ರೀಡೋತ್ಸವ ನಡೆಯಿತು. ಮಾರ್ ೧೫೦ಕ್ಕೂ ಹೆಚ್ಚು ಜಾನುವಾರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಿಶೇಷವಾಗಿತ್ತು.