Murdeshwar: ಸಮುದ್ರದ ತಳವನ್ನು ಅನ್ವೇಷಿಸಲು ನೇತ್ರಾಣಿ ಸ್ಕೂಬಾ ಡೈವಿಂಗ್

Murdeshwar: ಸಮುದ್ರದ ತಳವನ್ನು ಅನ್ವೇಷಿಸಲು ನೇತ್ರಾಣಿ ಸ್ಕೂಬಾ ಡೈವಿಂಗ್

 


ಮುರುಡೇಶ್ವರ: ಬದುಕಿನಲ್ಲಿ ಏನಾದರೂ ಹೊಸತನ್ನು ಪ್ರಯತ್ನ ಮಾಡಬೇಕು ಅನ್ನಿಸಿದರೆ ಅಥವಾ ಹೊಸ ಹೊಸ ಜಾಗಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಾದ ಅನುಭವಿಸಬೇಕು ಅನ್ನಿಸಿದರೆ ಒಮ್ಮೆಯಾದರೂ ನೇತ್ರಾಣಿ ದ್ವೀಪಕ್ಕೆ ಭೇಟಿ ನೀಡಬಹುದು. ನೀವು ಸಾಹಸ ಪ್ರವೃತ್ತಿಯವರಾಗಿದ್ದು, ಸಾಹಸ ಕ್ರೀಡೆಗಳನ್ನು ಆಡಬೇಕು ಅನ್ನಿಸಿದರೆ ಕೂಡ ಇದೇ ಜಾಗಕ್ಕೆ ಭೇಟಿ ನೀಡುವಂತೆ ಸಲಹೆ ನೀಡುತ್ತೇನೆ. ಏಕೆಂದರೆ ಕರ್ನಾಟಕದ ೭ನೇ ಅದ್ಭುತ ಎಂದೇ ಖ್ಯಾತಿ ಪಡೆದಿರುವ ನೇತ್ರಾಣಿ ದ್ವೀಪದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಅಲ್ಲಿನ ಅನುಭವಗಳನ್ನು ಮನಸಾರೆ ಸವಿಯಿರಿ.

ಸ್ಕೂಬಾ ಡೈವಿಂಗ್ ಸಾಹಸ ಕ್ರೀಡೆಗಳಲ್ಲಿ ಒಂದಾಗಿದೆ. ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲೂ ಅದಕ್ಕೆ ಅವಕಾಶವಿದೆ. ಸಾಕಷ್ಟು ಕಡೆಗಳಲ್ಲಿ ಸ್ಕೂಬಾ ಡೈವಿಂಗ್‌ಗೆ ಅವಕಾಶ ಇತ್ತಾದರೂ ಇಲ್ಲಿ ನಿಮಗೆ ವಿಭಿನ್ನವಾದ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಸ್ಕೂಬಾ ಡೈವಿಂಗ್ ಮಾಡಲು ಯಾವುದೇ ವಯಸ್ಸಿನ ಮಿತಿಯಿಲ್ಲ. ಆದರೆ ಸ್ವಲ್ಪ ಧೈರ್ಯ ಮಾಡಬೇಕು ಅಷ್ಟೇ. 

ಮುರುಡೇಶ್ವರದಲ್ಲಿರುವ ರೀಫ್ ಅಡ್ವೆಂಚರ್ಸ್ ಸ್ಕೂಬಾ ಡೈವಿಂಗ್ ಸೇವೆಯನ್ನು ಒದಗಿಸುತ್ತದೆ. ಅದಕ್ಕಾಗಿ ಮುಂಚೆಯೇ ಬುಕ್ ಮಾಡಿಕೊಳ್ಳುವುದು ಉತ್ತಮ. ಸ್ಕೂಬಾ ಡೈವಿಂಗ್ ಮಾಡಲು ಫೆಬ್ರವರಿಯಿಂದ ಜೂನ್ ವರೆಗೆ ಉತ್ತಮ ಸಮಯ. ಏಕೆಂದರೆ ಈ ಸಂದರ್ಭಗಳಲ್ಲಿ ಸಮುದ್ರದ ನೀರು ಶುಭ್ರವಾಗಿರುತ್ತದೆ. ಸಮುದ್ರದ ತಳವನ್ನು ನೋಡಲು ಚೆನ್ನಾಗಿರುತ್ತದೆ. ಹಾಗಾಗಿ ಬಹುತೇಕ ಜನರು ಇದೇ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಇಲ್ಲಿ ನಿಮಗೆ ಸಾಕಷ್ಟು ತರಹದ ಪ್ಯಾಕೇಜ್ ಕೂಡ ಲಭ್ಯವಿದೆ. 1999 ರೂ.ನಿಂದ 4999 ರೂ.ವರೆಗೆ ವಿಭಿನ್ನವಾದ ಪ್ಯಾಕೇಜ್ ಲಭ್ಯವಿದೆ. ನಿಮಗೆ ಬೇಕಾದ ಅಥವಾ ನಿಮಗೆ ಸೂಕ್ತ ಎನಿಸುವ ಪ್ಯಾಕೇಜನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಾಮಾನ್ಯವಾಗಿ ದಿನಕ್ಕೆ ಎರಡರಿಂದ ಮೂರು ತಂಡಗಳು ಇಲ್ಲಿಗೆ ಭೇಟಿ ನೀಡುವುದು ರೂಢಿ. ಸ್ಕೂಬಾ ಡೈವಿಂಗ್‌ಗೆ ಬರುವ ಜನರ ಸಂಖ್ಯೆಯ ಆಧಾರದ ಮೇಲೆ ತಂಡಗಳ ನಿರ್ಣಯವಾಗುತ್ತದೆ. ವೀಕೆಂಡ್‌ನಲ್ಲೂ ಸ್ಕೂಬಾ ಡೈವಿಂಗ್ ಸೇವೆ ಲಭ್ಯವಿದೆ. ಇಲ್ಲಿ ಸಾಕಷ್ಟು ಪರಿಣತಿ ಪಡೆದ ಸ್ಕೂಬಾ ಡೈವಿಂಗ್ ತರಬೇತುದಾರರು ಇದ್ದಾರೆ. ಹಾಗಾಗಿ ಸಮುದ್ರದ ಆಳಕ್ಕೆ ತೆರಳಿ ಅಲ್ಲಿನ ಜೀವರಾಶಿಗಳನ್ನು ವೀಕ್ಷಣೆ ಮಾಡಲು ಅವಕಾಶವಿದೆ. ಪ್ರತಿ ಹಂತದಲ್ಲೂ ನಿಮಗೆ ಸಹಾಯಕ್ಕೆ ಬರುವ ಈ ತಂಡದ ಸೇವೆ ನಿಜಕ್ಕೂ ಶ್ಲಾಘನೀಯ. 

ಸಮುದ್ರದ ಆಳದಲ್ಲಿ ಡೈವ್ ಮಾಡಿದ ಸಂದರ್ಭದಲ್ಲಿ Go Pro video, Ordinary video ಮಾಡಿಕೊಡುವ ವ್ಯವಸ್ಥೆಯೂ ಇದೆ. ಫೋಟೋಗ್ರಫಿ ಎಲ್ಲಾ ಪ್ಯಾಕೇಜ್‌ನಲ್ಲೂ ಉಚಿತವಾಗಿ ಲಭ್ಯವಿರುತ್ತದೆ. ಒಂದು ವೇಳೆ ನಿಮಗೆ ವೆಟ್ ಸೂಟ್ ಬೇಕಿದ್ದರೆ ದ್ವೀಪಕ್ಕೆ ತೆರಳುವ ಮುನ್ನವೇ ಕೇಳಿ ಪಡೆದುಕೊಳ್ಳಬಹುದು. 

ಮುರುಡೇಶ್ವರದಿಂದ ನೇತ್ರಾಣಿ ದ್ವೀಪಕ್ಕೆ ಸುಮಾರು ಒಂದುವರೆ ಗಂಟೆಗಳ ಕಾಲ ಬೋಟ್‌ನಲ್ಲಿ ಹೋಗಬೇಕು. ನೇತ್ರಾಣಿ ಗುಡ್ಡಕ್ಕೆ ತಲುಪಿದ ನಂತರ ನೀವು ಅಲ್ಲಿ ಸ್ಕೂಬಾ ಡೈವಿಂಗ್ ಮಾಡಬಹುದು. ಜೊತೆಗೆ ಸ್ವಿಮ್ಮಿಂಗ್ ಕೂಡ ಮಾಡಬಹುದು.

ಬೆಳಗ್ಗೆ 8.3ರ ವೇಳೆಗೆ ರೀಫ್ ಅಡ್ವೆಂಚರ್ಸ್ ಕಚೇರಿ ಬಳಿ ತೆರಳಿದರೆ ಸಾಕು, ಅಲ್ಲಿ ಎಲ್ಲಾ ರೀತಿಯಲ್ಲೂ ಸೂಕ್ತ ಮಾರ್ಗದರ್ಶನ ನೀಡಿ ನಿಮ್ಮನ್ನು ಬೋಟ್‌ಗೆ ಹತ್ತಿಸುತ್ತಾರೆ. ಸುಮಾರು 11 ಗಂಟೆಗೆ ಅಲ್ಲಿಗೆ ತಲುಪಿ ಪುನಹಃ 3 ಗಂಟೆಗೆ ವಾಪಸ್ ಅಲ್ಲಿಂದ ಹೊರಟಿ ಸುಮಾರು ೪.೩೦ರ ವೇಳೆಗೆ ವಾಪಸ್ ಬರಬಹುದು. 

ಒಟ್ಟಾರೆ ಒಂದು ದಿನದ ಸಾಹಸ ಯಾತ್ರೆ ಮಾಡಲು ಬಯಸಿದರೆ ಇದು ಉತ್ತಮ ಪ್ರವಾಸೀತಾಣ. 

ಸ್ಕೂಬಾ ಡೈವಿಂಗ್ ಮಾಡಲು ಬಯಸಿದರೆ ಬುಕಿಂಗ್ ಮಾಡಲು ಶರಣ್ ಅವರ ಮೊಬೈಲ್ ಸಂಖ್ಯೆ: +91 9886579003ಗೆ ಸಂಪರ್ಕಿಸಬಹುದಾಗಿದೆ.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article