Moodubidire: ಎಕ್ಸಲೆಂಟ್ ಗೆ ಮತ್ತೆ ಮೈಸೂರಿನ ಮಹಾರಾಜರ ಆಗಮನ
ಫೆ.25: ಎಕ್ಸಲೆಂಟ್ ನಲ್ಲಿ 'ಸೈಬರ್ ಸೆಕ್ಯೂರಿಟಿ ಸ್ಕೂಲ್ ಹೈಜೀನ್ ಪ್ರೋಗ್ರಾಮ್' ಉದ್ಘಾಟನೆ
ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಬೆಂಗಳೂರಿನ ಸೈಬರ್ ವರ್ಸ್ ಫೌಂಡೇಶನ್ ಜೊತೆಗಿನ ಜಂಟಿ ಆಶ್ರಯದಲ್ಲಿ 'ಸೈಬರ್ ಸೆಕ್ಯೂರಿಟಿ ಸ್ಕೂಲ್ ಹೈಜೀನ್ ಪ್ರೋಗ್ರಾಮ್'ನ ಉದ್ಘಾಟನಾ ಸಮಾರಂಭವು ಸಂಸ್ಥೆಯ ರಾಜ ಸಭಾಂಗಣದಲ್ಲಿ, ಫೆ. 25 ರಂದು 4:30ಕ್ಕೆ ನಡೆಯಲಿದ್ದು ಸೈಬರ್ ವರ್ಸ್ ಫೌಂಡೇಶನ್ ನ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮೈಸೂರು ಸಂಸ್ಥಾನದ ಮಹರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮವು ಶಿಕ್ಷಕರು ಮತ್ತು ಸಮುದಾಯಕ್ಕೆ ಸೈಬರ್ ಸುರಕ್ಷತಾ ಜಾಗರೂಕತೆಯನ್ನು ಹೆಚ್ಚಿಸುವಲ್ಲಿ ಮುಖ್ಯ ಹೆಜ್ಜೆಯಾಗಿದೆ. ಸೈಬರ್ ಸೆಕ್ಯೂರಿಟಿ ಸ್ಕೂಲ್ ಹೈಜೀನ್ ಕಾರ್ಯಕ್ರಮವು ಶಾಲೆಗಳಲ್ಲಿ ವಿಸ್ತಾರವಾದ ಸೈಬರ್ ಸೆಕ್ಯೂರಿಟಿ ಶಿಕ್ಷಣಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ರೂಪಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನ ಇಂದಿನ ಶಿಕ್ಷಣದ ಅವಿಭಾಜ್ಯ ಅಂಗವಾಗಿರುವ ಇಂದಿನ ದಿನಗಳಲ್ಲಿ ಆನ್ವೆನ್ ಜಗತ್ತನ್ನು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸುವ೦ತೆ ವಿದ್ಯಾರ್ಥಿಗಳಿಗೆ ಸೂಕ್ತ ಕೌಶಲ ಮತ್ತು ಜ್ಞಾನವನ್ನು ನೀಡುವುದರ ಮೂಲಕ ಸಜ್ಜುಗೊಳಿಸುವುದು ಬಹಳ ಮುಖ್ಯವಾಗಿದೆ.
ಜಾಗ್ರತಿ ಮೂಡಿಸುವುದು, ಜವಾಬ್ದಾರಿಯುತ ಡಿಜಿಟಲ್ ನಡವಳಿಕೆಯನ್ನು ಉತ್ತೇಜಿಸುವುದು,ಶಿಕ್ಷಕರನ್ನು ಸಶಕ್ತಗೊಳಿಸುವುದು, ಸಮುದಾಯವನ್ನು ಕ್ರಿಯಾಶೀಲಗೊಳಿಸುವುದು ವಿದ್ಯಾರ್ಥಿಗಳು ಈ ಕೋರ್ಸನ್ನು ಆನ್ಸೆನ್ ಕಲಿಕಾ ಪ್ಲಾಟ್ಸಾರ್ಮ್ ನ ಮೂಲಕ ಕಲಿಯಬಹುದಾಗಿದ್ದು, ಸಂಸ್ಥೆಗಳ ಅಗತ್ಯತೆಗಳನ್ನು ಪೂರೈಸಲು ಪೂರಕವಾಗಿದೆ. ಶಾಲೆಗಳಿಗೆ ತಮ್ಮ ನಿರ್ದಿಷ್ಟ ಅವಶ್ಯಕತೆಗಳಿಗನುಗುಣವಾಗಿ ಕೋರ್ಸನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ, ತನ್ಮೂಲಕ ಸೈಬರ್ ವರ್ಸ್ ಫೌಂಡೇಶನ್ ನ ಉದ್ದೇಶವನ್ನು ಈಡೇರಿಸುವಲ್ಲಿ ಪರಿಣಾಮಕಾರಿ ಕೊಡುಗೆ ನೀಡುತ್ತದೆ ಎಂದರು.
ಸೈಬರ್ ವರ್ಸ್ ಫೌಂಡೇಶನ್ ಸೆಕ್ಷನ್ 8ರ ಸಂಸ್ಥೆಯಾಗಿದ್ದು ಸೈಬರ್ ಸೆಕ್ಯೂರಿಟಿ ಅರಿವನ್ನು ಮೂಡಿಸುವ ಕೋರ್ಸನ್ನು ಒದಗಿಸುತ್ತದೆ. ಎಲ್ಲರಿಗೂ ಸೈಬರ್ ಸೆಕ್ಯೂರಿಟಿ ಭವಿಷ್ಯವನ್ನು ಒದಗಿಸುವ ದೂರದೃಷ್ಟಿಯನ್ನು ಹೊಂದಿದ್ದು ಈ ಫೌಂಡೇಶನ್ ಎಲ್ಲರಿಗೆ, ಅದರಲ್ಲೂ ಯುವಜನತೆಗೆ ಇದಕ್ಕೆ ಬೇಕಾದ ಎಲ್ಲಾ ರೀತಿಯ ಜ್ಞಾನ ಮತ್ತು ಕೌಶಲಗಳನ್ನು ಒದಗಿಸುವಲ್ಲಿ ಶ್ರಮಿಸುತ್ತಿದೆ.
ಸೈಬರ್ ವರ್ಸ್ ಫೌ0ಡೇಶನ್ ವಿದ್ಯಾ ಕ್ಷೇತ್ರದಲ್ಲಿ, ಉದ್ಯಮ ಕ್ಷೇತ್ರದಲ್ಲಿ ಮತ್ತು ಸರಕಾರೀ ವಲಯದಲ್ಲಿ ಸೈಬರ್ ಸೆಕ್ಯೂರಿಟಿ ಪೂರೈಸುವಲ್ಲಿ ಮುಂಚೂಣಿಯಲ್ಲಿದ್ದು ಮೈಸೂರಿನಲ್ಲಿ 2022 ರಲ್ಲಿ ಡಿಜಿಟಲ್ ಲ್ಯಾಬ್ ನೊಂದಿಗೆ ಸೆಂಟರ್ ಆಫ್ ಎಕ್ಸೆಲೆನ್ಸ್ ನ್ನು ಸ್ಥಾಪಿಸಿದೆ.
ಮುಖ್ಯ ಅತಿಥಿಯಾಗಿ ಶಾಸಕ ಉಮಾನಾಥ ಕೋಟ್ಯಾನ್, ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಸೈಬರ್ ವರ್ಸ್ ಫೌಂಡೇಶನ್ ನ ಬ್ಯುಸಿನೆಸ್ ಹೆಡ್ ಪದ್ಮ ಪ್ರಸಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಹಾಗೂ ಉಪನ್ಯಾಸಕ ವಾದಿರಾಜ ಕಲ್ಲೂರಾಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
