Kota: ಫೆ.16-17: ಕೋಟ ಶಾಂತಮೂರ್ತಿ ಶ್ರೀ ಶನೀಶ್ವರ ದೇವಳದ ವರ್ಧಂತ್ಯೋತ್ಸವ
ಕೋಟ: ಇಲ್ಲಿನ ಹಾಡಿಕೆರೆಬೆಟ್ಟು ವಿನ್ನಲ್ಲಿ ಪ್ರತಿಷ್ಠಾಪನೆಗೊಂಡ ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನದ 29ನೇ ವರ್ಷದ ವರ್ಧಂತ್ಯೋತ್ಸವವು ಫೆ.16 ಮತ್ತು 17 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಫೆ.16 ರಂದು ಬೆಳಿಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆ, ಫಲನ್ಯಾಸ, ಗುರುಗಣಪತಿ ಪೂಜೆ, ಪುಣ್ಯಾಹವಾಚನ, 6 ಕಾಯಿ ಗಣಯಾಗ, ಕನ್ನಿಕಾ ದುರ್ಗಾಪರಮೇಶ್ವರಿಗೆ 108 ಕಲಶ ಸ್ಥಾಪನೆ, ಅಧಿವಾಸ ಹೋಮ, ಚಂಡಿಕಾ ಹೋಮ, ಕಲಶಾಭಿಷೇಕ, ಮಹಾಪೂಜೆ/ಪರಿವಾರ ದೇವರುಗಳಾದ ಗಣಪತಿ, ಈಶ್ವರ, ನಂದಿ, ಆಂಜನೇಯ ದೇವರಿಗೆ 25 ಕಲಶ ಸ್ಥಾಪನೆ, ಅಧಿವಾಸಹೋಮ/ನವಗ್ರಹದೇವತಗಳಿಗೆ ಮತ್ತು ಕಾಕವಾಹನನಿಗೆ 9 ಕಲಶ ಸ್ಥಾಪನೆ, ಅಧಿವಾಸಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ.
ಸಾಯಂಕಾಲ 5 ಗಂಟೆಗೆ ಶ್ರೀ ಶನಿದೇವರಿಗೆ 108 ಕಲಶ ಸ್ಥಾಪನೆ, ಕಲಾಹೋಮ, ಅಧಿವಾಸ ಹೋಮ, ವಾಸ್ತುಪೂಜೆ, ಸುದರ್ಶನ ಹೋಮ, ದಿಗ್ಬಲಿದಾನ, ಪರಿವಾರ ದೇವತೆಯಾದ ಛಾಯಾದೇವಿ ಮತ್ತು ಯಕ್ಷೇಶ್ವರಿಗೆ 25 ಕಲಶ ಸ್ಥಾಪನೆ, ಅಧಿವಾಸ ಹೋಮ, ಕಲಶಾಭಿಶೇಕ/ಕ್ಷೇತ್ರ ಪಾಲಕನಿಗೆ 9 ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಫೆ.17 ರಂದು ಬೆಳಿಗ್ಗೆ 4.55ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಶನೀಶ್ವರ ಸ್ವಾಮಿಗೆ 108 ಕಲಾಶಾಭಿಷೇಕ, 8.30ಕ್ಕೆ ‘ಸಾಮೂಹಿಕ ಶನಿಶಾಂತಿ’ 11 ಗಂಟೆಗೆ ತುಲಾಭಾರ ಸೇವೆ, 12 ಗಂಟೆಗೆ ದರ್ಶನ ಸೇವೆ, ಮಧ್ಯಾಹ್ನ 12.30ಕ್ಕೆ ಅಲಂಕಾರ ಪೂಜೆ, ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1 ಗಂಟೆಗೆ ಶೀನಿಧಿ ಮ್ಯೂಸಿಕಲ್ಸ್ ಶ್ರೇಯಾ ನಾಗರಾಜ್, ಕಂಚುಗೋಡು ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ಜಟ್ಟಿಗೇಶ್ವರ ಭಜನಾ ಮಂಡಳಿ ರಾಚನಬೆಟ್ಟು, ಜನ್ನಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ಕ್ಕೆ ರಾತ್ರಿ ಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳದ ಅರ್ಚಕ ಜಯರಾಜ್ ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.