Kundapura: ಸ್ವಯಂಪ್ರೇರಿತ ರಕ್ತದಾನ ಶಿಬಿರ
Monday, February 5, 2024
ಕುಂದಾಪುರ: ಜೈ ಶಿವಾಜಿ ಸೇವಾ ಟ್ರಸ್ಟ್, ಹಟ್ಟಿಕುದ್ರು-ಹಟ್ಟಿಯಂಗಡಿ, ಶ್ರೀ ಮಹಾಗಣಪತಿ ಯುವಕ ಮಂಡಲ ಹಟ್ಟಿಕುದ್ರು, ಶ್ರೀ ಕೃಷ್ಣ ಪೈಪ್ ಇಂಡಸ್ಟ್ರೀಸ್ ಕರ್ಕಿ, ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಆಶ್ರಯದಲ್ಲಿ ಫೆ.೪ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿಕುದ್ರುನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನೆರವೇರಿತು.
ರಕ್ತದಾನ ಶಿಬಿರವನ್ನು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಇದರ ಸಭಾಪತಿ ಜಯಕರ್ ಶೆಟ್ಟಿ ಅವರು ಉದ್ಘಾಟಿಸಿದರು. ಡಾ. ಗೋವಿಂದ ಬಾಬು ಪೂಜಾರಿ, ಜಯಸೂರ್ಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ರಕ್ತದ ಆಪತ್ಬಾಂದವ ಸತೀಶ್ ಸಾಲಿಯಾನ್ ಮಣಿಪಾಲ, ಬಸ್ರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಹಟ್ಟಿಕುದ್ರು, ಸಮಾಜ ಸೇವಕರಾದ ಕೃಷ್ಣಯ್ಯ ಪೂಜಾರಿ, ನರೇಂದ್ರ ಉಡುಪ ಹಟ್ಟಿಕುದ್ರು, ಸುಮಂತ್ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಕ್ತದಾನಿಗಳು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರದಲ್ಲಿ ಒಟ್ಟು 68 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

