Mangalore: ಫೆ.11-18: ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟ ಬ್ರಹ್ಮಕಲಶೋತ್ಸವ: ಬ್ರಹ್ಮರಥೋತ್ಸವ

Mangalore: ಫೆ.11-18: ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟ ಬ್ರಹ್ಮಕಲಶೋತ್ಸವ: ಬ್ರಹ್ಮರಥೋತ್ಸವ


ಮಂಗಳೂರು: ನಗರದ ಉರ್ವಸ್ಟೋರ್‌ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಫೆಬ್ರವರಿ 11 ರಿಂದ ಫೆಬ್ರವರಿ 18 ರವರೆಗೆ ಅಷ್ಟ ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಶ್ರೀ ಮಹಾಗಣಪತಿ ಸೇವಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುರೇಂದ್ರ ರಾವ್ ಹೇಳಿದರು.

ಅವರು ಫೆ.5 ರಂದು ದೇವಸ್ಥಾನದ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಪ್ರತಿನಿತ್ಯ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಹಾಗೂ ಬ್ರಹ್ಮರಥವು ಸಮಪ್ರಣೆಯ ಬಳಿಕ ದೇವರ ಮೆರವಣಿಗೆ ನಡೆಯಲಿದ್ದು, ಇಲ್ಲಿಯ ಸಿಇಒ ಮನೆಯ ತನಕ ತೆರಳಲಿದೆ ಎಂದು ಹೇಳದರು.

ಈ ಪ್ರದೇಶವು ಕಾರಣೀಕ ಸ್ಥಳವಾಗಿದ್ದು, 1956ರಲ್ಲಿ ಮಹಾರಾಷ್ಟ್ರದ ನಾಶಿಕ್‌ನಿಂದ ಬಂದ ನಾಥ ಪಂಥದ ಮುನಿ ಓರ್ವರು ಈ ಸ್ಥಳದಲ್ಲಿ ಬರುತ್ತಿರುವಾಗ ಮುಂದೊಂದು ದಿನ ಇದು ಕಾರಣೀಕ ಸ್ಥಳವಾಗಲಿದೆ ಎಂದು ತಿಳಿಸಿದ್ದರು. ನಂತರ ಲೋಕೋಪಯೋಗಿ ಇಲಾಖೆಯವರು ಇಲ್ಲಿ ನಿವೇಶನ ನಿರ್ಮಾಣದ ಸಂದರ್ಭ ಸಿಕ್ಕ ಕಪ್ಪು ಕಲ್ಲು ಸಿಕ್ಕಿದ್ದು, ಅದನ್ನು ಶಿವಯೋಗಿ ಎಂಬುವವರು ಈ ಕಲ್ಲನ್ನು ಬೆಂಗಳೂರಿಗೆ ಕೊಂಡೋಗಿ ಅಲ್ಲಿ ದೇವರ ವಿಗ್ರಹವನ್ನು ಕೆತ್ತಿಸಿ ಅವರ ನಿಧನದ ನಂತರ ಇಲ್ಲಿಗೆ ತಂದು ಸಣ್ಣ ಗರ್ಭಗುಡಿಯನ್ನು ನಿರ್ಮಿಸಿದ್ದು, 2000ದಲ್ಲಿ ಇಲ್ಲಿ ಮೊದಲ ಬಾರಿಗೆ ಬ್ರಹ್ಮಕಲಶೋತ್ಸವ ನಡೆಯಿತು. ನಂತರ 2010 ರಲ್ಲಿ ಬ್ರಹ್ಮಕಲಶೋತ್ಸವ ನಡೆದಿದ್ದು, 2022 ರಲ್ಲಿ ನಡೆಯಬೇಕಿದ್ದ ಬ್ರಹ್ಮಕಲಶೋತ್ಸವ ಕಾಲ ಸರಿ ಇಲ್ಲದ ಕಾರಣ ಮುಂದೂಡಲಾಗಿದ್ದು, ಈಗ ಅದರೊಂದಿಗೆ ಬ್ರಹ್ಮರಥವನ್ನು ಅರ್ಪಿಸಲು ಮುಂದಾಗಿದ್ದು, ಇದರೊಂದಿಗೆ ಬ್ರಹ್ಮಕಲಶೋತ್ಸವ ನಡೆಸಲಾಗುವುದು ಎಂದು ತಿಳಿಸಿದರು.

ಫೆಬ್ರವರಿ 8 ರಂದು ದೇವಸ್ಥಾನದಲ್ಲಿ ಹರಿಸುಹೊರೆ ಕಾಣಿಕೆ ನಡೆಯಲಿದ್ದು, ಬ್ರಹ್ಮಕಲಶೋತ್ಸವದ ಎಲ್ಲಾ ದಿನವೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.

ಪ್ರಮುಖರಾದ ಸತೀಶ್ ಆಳ್ವಾ, ಗೋಪಾಲ ಕೃಷ್ಣ ಪೂಜಾರಿ, ಗಿರಿಧರ್ ಶೆಟ್ಟಿ, ಶ್ರೀಕಾಂತ್ ರಾವ್ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article