Mangalore: ವಿಶ್ವಗುರು ಬಸವಣ್ಣ  ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ

Mangalore: ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ


ಮಂಗಳೂರು: ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ವಿಶ್ವಗುರು ಬಸವಣ್ಣ  ಸಾಂಸ್ಕೃತಿಕ ನಾಯಕ ಭಾವಚಿತ್ರವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ್ ಭಂಡಾರಿ ಎಂ. ಅನಾವರಣ ಮಾಡಿದರು.

ಕಾಲೇಜಿನ ಸಮಾಜಕಾರ್ಯ ವಿಭಾಗದ ಪ್ರಾಧ್ಯಪಕಿ ಅರುಣ ಕುಮಾರಿ ಅವರು ಬಸವಣ್ಣ ಅವರ ಕುರಿತು ಮಾತನಾಡಿದರು. ಪ್ರಾಣಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅಶೋಕ್ ಬಸವಣ್ಣರ ವಚನವನ್ನು ಹಾಡಿದರು. ಕನ್ನಡ ವಿಭಾಗದ ಪ್ರಾಧ್ಯಪಕಿ ಡಾ. ಜೋತಿಪ್ರಿಯಾ ಪ್ರಾಸ್ತವಿಕ ಮಾತುಗಳನ್ನಾಡಿದರು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಪಕಿ ಡಾ. ಕೃಷ್ಣಪ್ರಭಾ ಅವರು ಸ್ವಾಗತಿಸಿ, ನಿರೂಪಿಸಿದರು.

ಕಾಲೇಜಿನ ಪ್ರಾಧ್ಯಪಕರುಗಳು, ಉಪನ್ಯಾಸಕರು, ಬೋದಕೇತರ ಸಿಬ್ನಂದಿಗಳು, ಮೌಲ್ಯಮಾಪನಕ್ಕೆ ಬಂದಂತಹ ಉಪನ್ಯಾಸಕರು ಉಪಸ್ಥಿತರಿದ್ದರು.


























Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article