Mangalore: ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ಪ್ರತಿಭಟನೆ
ಮಂಗಳೂರು: ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿ ಕೋಮುಗಲಭೆ ಏರ್ಪಟ್ಟಿದ್ದು, ಇದು ಜಾತಿಯ ಧರ್ಮದ ಧಂಗಲ್ ಅಲ್ಲ. ಇದು ಕಾಂಗ್ರೆಸ್ ಧಂಗಲ್ ಎಂದು ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ ದೂರಿದರು.
ಭಾರತೀಯ ಜನತಾ ಪಾರ್ಟಿಯ ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಹೇಳನೆ ಮಾಡಿದ್ದು, ಶಾಸಕರುಗಳಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ವೈ. ಇಬ್ಬರು ಕಾರ್ಪೋರೇಟರ್ಗಳು, ವಿಶ್ವ ಹಿಂದೂ ಪರಿಷತ್ನ ಮುಖಂಡರ ಮೇಲೆ ಸುಳ್ಳು ಕೇಸು ದಾಖಲಿಸಿರುವ ವಿರುದ್ಧ ಫೆ.19 ರಂದು ನಗರದ ಮಿನಿ ವಿಧಾನಸೌಧದ ಮುಂಬಾಗ ಇರುವ ಕ್ಲಾಕ್ ಟವರ್ ಬಳಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ದ.ಕ. ಜಿಲ್ಲೆಯಲ್ಲಿ ಅನೇಕ ಕಡೆ ಮತಾಂತರ ನಡೆಯುತ್ತಿದ್ದು, ಶಾಲೆಗಳಲ್ಲಿ ಮತ್ತು ಮನೆಗಳಿಗೆ ತೆರಳಿ ಕರಪತ್ರ ಹಂಚುವ ಮೂಲಕ ಮತಾಂತರಕ್ಕೆ ಯತ್ನ ನಡೆಯುತ್ತಿದ್ದು, ಕ್ರಿಶ್ಚಿಯನ್ ಪಾದ್ರಿ ರಾಬರ್ಟ್ ರೊಜಾರಿಯೋ ಅವರು ನಮ್ಮ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಫಾದರ್ಗಳಿಗೆ, ಸಿಸ್ಟರ್ಗಳಿಗೆ ಮತಾಂತರ ನಡೆಯುವ ತರಬೇತಿ ಕೇಂದ್ರ ಇದೆ ರಂದು ಹೇಳಿದ್ದು, ಸಿಸ್ಟರ್ ಪ್ರಭಾ ನೀವು ಮಕ್ಕಳಿಗೆ ಪಾಠ ಮಾಡುತ್ತಿದ್ದಿರೋ, ಮತಾಂತರ ಮಾಡುತ್ತಿದ್ದಿರೋ?, ನೀವು ಕಳೆದ 5 ವರ್ಷದ ಹಿಂದಿನಿಂದಲೂ ಮತಾಂತರ ಕೆಲಸ ಮಾಡುತ್ತಿದ್ದಿರಿ ಎಂದು ತಿಳಿದುಬಂದಿದ್ದು, ಇದಕ್ಕೆ ನೀವು ಉತ್ತರಿಸಬೇಕು. ಸಿಸ್ಟರ್ ಪ್ರಭಾ ಎಲ್ಲಿ ಅಡಗಿ ಕೂತಿದ್ದಿರಾ? ನೀವು ನಿಜವಾದ ಹೆಣ್ನೇ ಆಗಿದ್ದಲ್ಲಿ ಎದುರಿಗೆ ಬಂದು ಉತ್ತರಿಸಿ. ಇಲ್ಲದಿದ್ದಲ್ಲಿ ಮುಖಕ್ಕೆ ಕಪ್ಪು ಬಟ್ಟೆ ಹಾಕಿ ತಿರುಗಿ ಎಂದು ಹೇಳಿದರು.
ಜೆರೋಸಾ ಶಾಲೆಯಲ್ಲಿ ಇಂತಹ ಘಟನೆಯಾಗಿದೆ ಎಂದು ತಿಳಿದರೂ ನಗರದ ಪೊಲೀಸರು ಏನು ಮಾಡಿಲಿಲ್ಲ. ಪೊಲೀಸರು ಸಿಸ್ಟರ್ ಮತ್ತು ಶಾಲೆಯ ಮೇಲೆ ದೂರು ದಾಖಲಿಸಬೇಕಿತ್ತು. ಪೊಲೀಸರು ಕಾಂಗ್ರೆಸ್ಗೆ ಬೆಂಬಲವಾಗಿ ನಿಂತರೆ ಮುಂದೊಂದು ದಿನ ಸಮಸ್ಯೆಯನ್ನು ಎದುರಿಸಬೇಕಾದಿತು ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ತುಘಲಕ್ ಸರ್ಕಾರದ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿಯ ಬದಲು ಕೊಜಂಟ್ ನೀಡಿದ್ದು, ಅದರಲ್ಲಿ ಎಷ್ಟು ಹಿಂಡಿದರೂ ಏನೂ ಬರುವುದಿಲ್ಲ. ಇದರೊಂದಿಗೆ ಕಾಂಗ್ರೆಸ್ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಿದ್ದರಾಮಯ್ಯ ಅವರು ಪ್ರಧಾನ ನರೇಂದ್ರ ಮೋದಿ ಅವರಿಗೆ ಏಕ ವಚನದಲ್ಲಿ ಮಾತನಾಡಿ ಅವಮಾನಿಸುತ್ತಿದ್ದು, ಪ್ರಧಾನಿ ಅವರಿಗೆ ಮರಿಯಾದೆ ನೀಡಬೇಕು ಎಂಬ ಸೌಜನ್ಯ ಇಲ್ಲದಾಗಿದೆ. ಖರ್ಗೆ ಅವರಿಗೆ 80 ವರ್ಷ ಆಗಿದ್ದು, ಅವರಿಗೆ ಅರಳು ಮರಳು ಪ್ರಾರಂಭವಾಗಿದ್ದು, ಇವರು ಫೇಕ್ ಗಾಂಧಿಯ ಅನುಯಾಯಿಗಳು, ಇವರೆಲ್ಲ ಫೇಕ್ ಗಾಂಧಿಗಳು. ಆದರೆ ದೇಶಕ್ಕೆ ಅಂದು ಗಾಂಧಿ ಇಂದು ಮೋದಿ ಎಂದು ಹೇಳಿದರು.
ಶಾಸಕರುಗಳ ವಿರುದ್ಧ ದೂರು ದಾಖಲಿಸಿದ್ದು, ಇದು ಶಾಸಕರುಗಳ ಮೇಲಿನ ದೂರಲ್ಲ. ಇದು ನಮ್ಮಲ್ಲರ, ಹಿಂದೂಗಳ ಮೇಲೆ ದಾಖಲಾದ ದೂರುಗಳು, ಇಲ್ಲಿಗೆ ಬಂದಿರು ಕಾರ್ಯಕರ್ತರು, ಬಾರದ ಕಾರ್ಯಕರ್ತರು ಬುಲ್ಡೋಜರ್ಗಳಾಗಿ ಶಾಸಕರ ಧ್ವನಿಯಾಗಬೇಕು. ಇಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಬುಲ್ಡೋಜರ್ಗಳಾಗಬೇಕು ಆಗ ಮಾತ್ರ ಇಲ್ಲಿ ಕಾಂಗ್ರೆಸ್ ಬರೋದಿಲ್ಲ ಎಂದರು. ಸರ್ಕಾರ ಕೇಸು ಹಿಂಪಡೆಯದಿದ್ದಲ್ಲಿ ನಿಮಗೆ ಇದೇ ಸಮಸ್ಯೆ ಕಚ್ಚಲಿದೆ. ಈ ಧಂಗಲ್ ರಾಜ್ಯಾಧ್ಯಂತ ನಡೆಯಲಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ ೨೦ ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದ್ದು, ಅವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅದು ರಾಜ್ಯದಲ್ಲಿ ಅಲ್ಲ ದೇಶದಲ್ಲಿ ೨೦ ಸ್ಥಾನ ಗೆಲ್ಲಲಿದೆ. ದ.ಕ.ದಲ್ಲಿ ನಳಿನ್ ಕುಮಾರ್ ಎದುರು ಹಾಗೂ ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೋಭಾ ಕರಂದ್ಲಾಜೆ ಅವರ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಧೈರ್ಯವಿದ್ದಲ್ಲಿ ಬಂದು ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಎಸೆದರು.
ಕಾಂಗ್ರೆಸ್ ನಾಯಕ ರವಿಶಂಕರ್ ಮಿಜಾರ್ ಮಾತನಾಡಿ, ೭೦ ವರ್ಷದಲ್ಲಿ ನಿಗೂಡವಾಗಿ ಹಿಂದೂಗಳ ವಿರುದ್ಧ ಷದ್ಯಾಂತರ ಮಾಡುತ್ತಲೇ ಬಂದಿದ್ದು, ನಮ್ಮ ದೇಶದಲ್ಲಿ ಅತ್ಯಾಂತ ಹಳೆಯ ವಿಶ್ವವಿದ್ಯಾನಿಯವಾದ ನಳಂದ ವಿಶ್ವವಿದ್ಯಾನಿಲದವನ್ನು ೧೮ನೇ ಶತಮಾನದಲ್ಲಿ ಲಾರ್ಡ್ ಮೆಕಾಲೆ ದಂಡೆತ್ತು ಬಂದಿದ್ದು, ೩ ಬಾರಿ ಅಧ್ಯಾಯನ ಮಾಡಿ ಇಲ್ಲಿಯ ಜನರನ್ನು ಬಗ್ಗಿಸಬೇಕಾದರೆ ಇಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಬದಲಿದಸಬೇಕು ಎಂದು ತಿಳಿಸಿ ಬ್ರಿಟೀಷರ ಪಠ್ಯವನ್ನು ಸೇರಿಸಿದ್ದರು. ಈಗ ಮೋದಿ ಪ್ರಧಾನಿಯಾದ ನಂತರ ಎನ್ಇಪಿಯನ್ನು ಜಾರಿಗೆ ತಂದಿದ್ದು, ಈ ಜನರಲ್ಲಿ ಭಯ ಉಂಟಾಗಿದೆ. ಆದುದರಿಂದ ಇದನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಪೂಜಾ ಪೈ, ರಮೇಶ್, ರಾಜಗೋಪಾಲ್ ರೈ, ಮಹೇಶ್ ಜೋಗಿ, ಪ್ರೆಮಾನಂದ ಶೆಟ್ಟಿ, ಅರುಣ್ ಶೆಟ್ಟಿ, ದಿವಾಕರ್, ವಿಜಯ್ ಕುಮಾರ್ ಶೆಟ್ಟಿ, ಕಾರ್ಪೊರೇಟರ್ಗಳು ಮತ್ತಿತರರು ಉಪಸ್ಥಿತರಿದ್ದರು.
"ಕ್ರಶ್ಚಿಯನ್ ಧರ್ಮ ಹುಟ್ಟುವ ಮೊದಲು ಹಿಂದೂ ಧರ್ಮ ಉಟ್ಟಿದೆ:
ಸಿಸ್ಟರ್ ಪ್ರಭಾ ಅವರೆ ನೀವು ನೈಜ ಸಿಸ್ಟರ್ ಆದರೆ, ನೀವು ನಿಜವಾದ ಕ್ರಿಸ್ಚಿಯನ್ ಆಗಿದ್ದಲ್ಲಿ ಸಿಸ್ಟರ್ ನೀವು ಹುಟ್ಟಿದ್ದು ಯಾವಾಗ?, ನಿಮ್ಮ ಅಪ್ಪ ಹುಟ್ಟಿದ್ದು ಯಾವಾಗ?, ನಿಮ್ಮ ಅಜ್ಜ ಹುಟ್ಟಿದ್ದು ಜಾವಾಗ? ಧರ್ಮ ಹುಟ್ಟಿದ್ದು ಯಾವಾಗ?, ಇದೆಲ್ಲ ಹುಟ್ಟುವ ಮೊದಲೇ ಹಿಂದೂ ಧರ್ಮ, ಶ್ರೀರಾಮ ದೇವರು, ಶ್ರೀ ಕೃಷ್ಣ ದೇವರು ಹುಟ್ಟಿದ್ದಾರೆ. ಇದಕ್ಕೆ ನೀವು ಉತ್ತರಿಸಿ. -ಹರಿಕೃಷ್ಣ ಬಂಟ್ವಾಳ, ಬಿಜೆಪಿ ನಾಯಕರು.
ಕಾಂಗ್ರೆಸ್ ಸರ್ಕಾರದಿಂದ ಕೇವಲ ಗಾಂಧಿ ಕುಟುಂಬಕ್ಕೆ ಭಾರತ ರತ್ನ:
ಕಾಂಗ್ರೆಸ್ ಸರ್ಕಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು, ಕಾಂಗ್ರೆಸ್ ಅವರು ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ. ಅವರಿಗೆ ನೀಡಿದವರು ಯಾರು?. ಕಾಂಗ್ರೆಸ್ ಕೇವಲ ನೆಹರು, ಇಂದಿರಾ ಗಾಂಧಿ, ರಾಜಿವ್ ಗಾಂಧಿ ಅವರಿಗೆ ನೀಡಿದೆ. ಇನ್ನು ಪಪ್ಪುಗೆ ಮಾತ್ರ ಕೊಡಲು ಬಾಕಿ ಇದೆ. ಅವನಿಗೆ ಯಾವುದೇ ಕಾರಣಕ್ಕೂ ನೀಡಲು ಸಾಧ್ಯವಿಲ್ಲ. -ಹರಿಕೃಷ್ಣ ಬಂಟ್ವಾಳ, ಬಿಜೆಪಿ ನಾಯಕರು."
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಜೈ ಶ್ರೀರಾಮ ಜೈಕಾರ ಮೊಳಗಿತು.









