Mangalore: ಸ್ವರ್ಣ ಲಾಲ್ಕಿಯ ಭವ್ಯ ಪುರಪ್ರವೇಶ
Friday, February 2, 2024
ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಮಹೋತ್ಸವ ಕಾರ್ಯಕ್ರಮಕ್ಕೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿ ಯ ಭವ್ಯ 'ಪುರ ಪ್ರವೇಶ' ಕಾರ್ಯಕ್ರಮ ಶುಕ್ರವಾರ ಸಂಘನಿಕೇತನದಿಂದ ಪ್ರಾರಂಭಗೊಂಡು ಮಣ್ಣಗುಡ್ಡ, ಕುದ್ರೋಳಿ, ರಥಬೀದಿ ಮೂಲಕ ಶ್ರೀ ದೇವಳಕ್ಕೆ ವಿಜೃಂಭಣೆಯಿಂದ ತರಲಾಯಿತು.
ಸುಮಾರು 35 ಕೆ.ಜಿ. ಬಂಗಾರ, 70 ಕೆ.ಜಿ. ಬೆಳ್ಳಿಯಿಂದ ನಿರ್ಮಾಣ ಮಾಡಲಾದ ಈ ಸ್ವರ್ಣ ಪಲ್ಲಕಿಯನ್ನು ಬ್ರಹ್ಮರಥೋತ್ಸವದ ಹಿಂದಿನ ದಿನ ನಡೆಯುವ ಶ್ರೀ ದೇವರ ಮೃಗಬೇಟೆ ಉತ್ಸವದಂದು ಶ್ರೀ ಕಾಶೀ ಮಠಾಧೀಶರಾದ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರ ಅಮೃತ ಹಸ್ತಗಳಿಂದ ಸಮರ್ಪಿಸಲಾಗುವುದು.
ಈ ಸ್ವರ್ಣ ಲಾಲ್ಕಿಯನ್ನು ಸೇವಾರೂಪದಲ್ಲಿ ಕೊಡುಗೈ ದಾನಿ ಡಾ. ಪಿ. ದಯಾನಂದ ಪೈ ಕುಟುಂಬಸ್ಥರು ಹಾಗೂ ಹತ್ತು ಸಮಸ್ತರ ಸೇವಾರೂಪದಲ್ಲಿ ನೀಡಲಾದ ಸ್ವರ್ಣ ಮತ್ತು ರಜತದಿಂದ ಸಮರ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಡಾ. ಪಿ. ದಯಾನಂದ ಪೈ, ದೇವಳದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಕೆ. ಗಣೇಶ್ ಕಾಮತ್, ಎಂ. ಜಗನ್ನಾಥ್ ಕಾಮತ್, ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ, ಪಂಡಿತ್ ಕಾಶೀನಾಥ್ ಆಚಾರ್ಯ, ಉದ್ಯಮಿ ಸುರೇಶ್ ವಿ. ಕಾಮತ್ ಹಾಗೂ ಶಾಸಕ ಡಿ. ವೇದವ್ಯಾಸ್ ಕಾಮತ್ ಉಪಸ್ಥಿತರಿದ್ದರು.







