Mangalore: ಮಾತೃ ಭಾಷೆ ದಿನ ವಿಶ್ವಸಂಸ್ಥೆಯ ಕೊಡುಗೆ: ಡಾ. ಅನಸೂಯ ರೈ

Mangalore: ಮಾತೃ ಭಾಷೆ ದಿನ ವಿಶ್ವಸಂಸ್ಥೆಯ ಕೊಡುಗೆ: ಡಾ. ಅನಸೂಯ ರೈ


ಮಂಗಳೂರು: ಸರಳ ಸಂವಹನಕ್ಕಾಗಿ ಮಾತೃ ಭಾಷೆ ಅತಿ ಅಗತ್ಯ. ಆದ್ದರಿಂದ ವಿವಿಧ ಪ್ರಾಂತ್ಯದ ಜನರು ತಮ್ಮದೇ ಮಾತೃ ಭಾಷೆ ಅನುಸರಿಸುತ್ತಾರೆ. ಇದು ವಿಶ್ವಸಂಸ್ಥೆಯಿಂದ ನಮಗೆ ದೊರಕಿದ ಬಹುದೊಡ್ಡ ಕೊಡುಗೆಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಷ್ಟ್ರೀಯ ಮಾತೃ ಭಾಷೆ ದಿನದ ಅಂಗವಾಗಿ ನಡೆದ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಫೆ.26 ರಂದು ಅವರು ಉದ್ಘಾಟಿಸಿ ಮಾತನಾಡಿದರು.

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿಭಜನೆ ನಂತರ ಬಾಂಗ್ಲಾದೇಶ ಉರ್ದು ಭಾಷೆಯನ್ನು ಅಧಿಕೃತವಾಗಿ ಗುರುತಿಸಿ ಘೋಷಿಸಬೇಕೆಂದು ವಿದ್ಯಾರ್ಥಿಗಳು ಹೋರಾಟ ನಡೆಸಿದರು. ಈ ಚಳವಳಿಯಲ್ಲಿ ಪ್ರಾಣತೆತ್ತ ವಿದ್ಯಾರ್ಥಿಗಳ ನೆನಪಿಗಾಗಿ ಫೆ. 21ರಂದು ರಾಷ್ಟ್ರೀಯ ಮಾತೃ ಭಾಷೆ ದಿವಸ ಎಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡ, ತುಳು, ಹಿಂದಿ, ಕೊಂಕಣಿ ಭಾಷೆಗಳ ಪ್ರಾಮುಖ್ಯತೆ ಕುರಿತು ವಿದ್ಯಾರ್ಥಿಗಳು ಮಾಹಿತಿ ನೀಡಿದರು. ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಉಪಸಿತರಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article