Mangalore: ವಿದ್ಯಾರ್ಥಿಗಳ ದುರಂತ ಶಾಸಕ ಡಾ. ಭರತ್ ಶೆಟ್ಟಿ ವೈ ದಿಗ್ಬ್ರಮೆ: ಗೃಹ ಸಚಿವರಿಗೆ ಮಾಹಿತಿ
Wednesday, February 28, 2024
ಮಂಗಳೂರು: ಸುರತ್ಕಲ್ ಶಾಲೆಯೊಂದರ ವಿದ್ಯಾರ್ಥಿಗಳು ಹಳೆಯಂಗಡಿ ಬಳಿಯ ನಂದಿನಿ ನದಿಯಲ್ಲಿ ಮುಳುಗಿ ದುರಂತ ಸಾವಿಗೀಡಾಗಿರುವ ಬಗ್ಗೆ ದಿಗ್ಬ್ರಮೆ, ಆಘಾತ ವ್ಯಕ್ತಪಡಿಸಿದ್ದಾರೆ.
ತಾನು ಬೆಂಗಳೂರಿನಲ್ಲಿದ್ದು, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಶಿಕ್ಷಣ ಇಲಾಖೆಗೆ ಸಂಬಂದಿಸಿದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಪ್ರಮುಖ ಅಧಿಕಾರಿಗಳನ್ನು ಕಳಿಸಲಾಗುದು. ತಾನು ಸ್ವತಹ ಗೃಹ ಸಚಿವರಿಗೆ ಮಾಹಿತಿ ನೀಡಿ ಕುಟುಂಬಕ್ಕೆ ಗರಿಷ್ಟ ಪರಿಹಾರ ಒದಗಿಸಲು ಮುಂದಾಗುತ್ತೇನೆ. ನೊಂದಿರುವ ಕುಟುಂಬಕ್ಕೆ ದೇವರು ನೋವು ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ವಿದ್ಯಾರ್ಥಿ ವೃಂದ ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಸುರಕ್ಷತೆಯಿಂದಿರಲು ಗಮನ ನೀಡಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.