Mangalore: ಯುವಜನತೆಗೆ ಟೆಡ್‌ಎಕ್ಸ್‌ನಂತಹ ಕಾರ್ಯಕ್ರಮದ ಅವಶ್ಯಕತೆ ಇದೆ

Mangalore: ಯುವಜನತೆಗೆ ಟೆಡ್‌ಎಕ್ಸ್‌ನಂತಹ ಕಾರ್ಯಕ್ರಮದ ಅವಶ್ಯಕತೆ ಇದೆ


ಮಂಗಳೂರು: ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳನ್ನು ಮಾತ್ರವಲ್ಲದೆ ಪಠ್ಯೇತರ ಚಟುವಟಿಗೆಗಳ ಕಡೆಗೂ ಗಮನ ಹರಿಸಬೇಕು. ಇಂತಹ ಚಟುವಟಿಗಳಿಗೆ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯು ಅಂದಿನಿಂದ ಇಂದಿನವರೆಗೂ ಸದಾ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಟೆಡ್‌ಎಕ್ಸ್‌ನಂತಹ ವಿನೂತನ ಕಾರ್ಯಕ್ರಮಗಳು ಇಂದಿನ ಯುವಜನತೆಗೆ ಬಹಳ ಅಗತ್ಯವಿರುವ ಕಾರ್ಯಕ್ರಮ. ಇಂತಹ ಕಾರ್ಯಕ್ರಮವು ವಿದ್ಯಾರ್ಥಿಗಳ ಕೌಶಲ್ಯ, ವೈಯಕ್ತಿಕ ಅಭಿವೃದ್ಧಿಗೊಳಿಸಲು ಸಹಕಾರಿಯಾಗುತ್ತದೆ ಎಂದು ಅದಾನಿ ಸಮೂಹಗಳ ಕಾರ್ಯಕಾರಿ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವಾ ಹೇಳಿದರು.

ಅವರು ಫೆ.3 ರಂದು ನಗರದ ಸಂತ ಅಲೋಶಿಯಸ್ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಮಂಗಳೂರು ಆಯೋಜಿಸಿದ ಟೆಡ್ ಎಕ್ಸ್‌ಸ್ಯಾಕ್ ‘ಕೋಸ್ಸಿ’ ಸಮಾರಂಭವನ್ನು ಎಲ್ಸಿಆರ್‌ಐ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಈ ಬಾರಿಯ ಟೆಡ್‌ಎಕ್ಸ್ ಸ್ಯಾಕ್‌ನಲ್ಲಿ ಒಟ್ಟು 12 ಮಂದಿ ಭಾಷಣಗಾರರಿದ್ದು, ಟಿವಿ ಕಲಾವಿದ ಹಾಗೂ ಹಾಸ್ಯಗಾರ ಗಿರಿಶ್ ಸಹದೇವ್, ಯುದ್ದ ಪರಿಣಿತ ಮೇಜರ್ ಸಮರ್ ತೂರ್, ಡಿಜಿಟಲ್ ಕಂಟೆಟ್ ಕ್ರಿಯೇಟರ್ ನೀರಜ್ ಚೌದರಿ, ಹಿನ್ನಲೆ ಗಾಯಕ ಸಂಗೀತ ನಿರ್ಮಾಪಕ ಕಾರ್ತಿಕ್ ಚೆನ್ನೋಜಿ ರಾವ್, ಬಾರತೀಯ ಅಂಧರ ಕ್ರಿಕೇಟ್ ತಂಡದ ಮಾಜಿ ನಾಯಕ ಪದ್ಮಶ್ರೀ ಪುರಸ್ಕೃತ ಶೇಖರ್ ನಾಯ್ಕ್, ಎಲ್ಜಿಬಿಟಿಕ್ಯೂನ ಕಾರ್ಯಕರ್ತೆ ಆರತಿ ಮಲ್ಹೋತ್ರ, ಪಶ್ಷಿಮ ಬೆಂಗಾಲದ ಖ್ಯಾತ ಛಾಯಾಚಿತ್ರಗಾರ ವಿಕ್ಕಿ ರೋಯ್

ಭರನಾಟ್ಯ ಕಲಾವಿದ ವಂ.ಫಾ. ಸಜು ಜಾರ್ಜ್ ಎಸ್.ಜೆ., ಆಸಿಡ್ ದಾಳಿಗೆ ಒಳಗಾದ ಪ್ರಮೋದಿನಿ ರಾವುಲ್, ಮಾಸ್ಟರ್ ಶೆಫ್ ಇಂಡಿಯಾದ ಅಂತಿಮ ಸ್ಪರ್ಧಿ ಡಾ. ರುಕ್ಸರ್ ಸಯ್ಯದ್, ಉದ್ಯಮಿ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ದೀಕ್ಷಿತ್ ರೈ, ವಿಯೆಟ್ನಂನಲ್ಲಿ ವೈಇಪಿ ಭಾರತವನ್ನು ಪ್ರತಿನಿಧಿಸಿದ ಎನ್‌ಸಿಸಿ ಕೆಡೆಟ್ ಆಶ್ನಾ ರೈ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಠಾಧಿಕಾರಿ ವಂ.ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಎಸ್.ಜೆ. ಮಾತನಾಡಿ, ಸತತ ಪರಿಶ್ರಮಮದಿಂದ ಯಶಸ್ಸುಗಳಿಸಲು ಸಾಧ್ಯ. ನಮ್ಮ ಕಾಲೇಜು ಇಂದು ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯವಾಗಲು ಇದುವೇ ಉತ್ತಮ ಉದಾಹರಣೆ ಎಂದರು.

ಸಂತ ಅಲೋಶಿಯಸ್ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿ (ಪ್ರಭಾರ) ವಂ.ಫಾ. ಪ್ರವೀಣ್ ಮಾರ್ಟೀಸ್ ಎಸ್.ಜೆ., ಸಂಯೋಜಕಿ ಡಾ. ಸ್ಮಿತಾ ಡಿ.ಕೆ., ಸಹ ಸಂಯೋಜಕಿ ಕ್ಲಾರೆಟ್ ವಿನಯ ಪಿರೆರಾ ಹಾಗೂ ಫ್ಲೋನಾ ಸೋನ್ಸ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article