Moodubidire: ಶ್ರೀಪಾದುಕಾ ಪೂಜೆ ಹಾಗೂ ಶ್ರೀಗುರುಭಿಕ್ಷಾ ಸೇವೆ
Sunday, February 4, 2024
ಮೂಡುಬಿದಿರೆ: ಮೂಡುಬಿದಿರೆ ಆಲಂಗಾರು ಶ್ರೀ ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಶ್ರೀಪಾದುಕಾ ಪೂಜೆ ಹಾಗೂ ಶ್ರೀಗುರುಭಿಕ್ಷಾ ಸೇವೆಯನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಆಶೀರ್ವಚನ ನೀಡಿದರು.
ಶನಿವಾರ ಸಂಜೆ ಶ್ರೀಕರಾರ್ಚಿತ ಶ್ರೀಸೀತಾರಾಮಚಂದ್ರ ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವತೆಗಳೊಂದಿಗೆ ಶ್ರೀಗಳು ಚಿತ್ತೈಸಿದ್ದರು.
ಧೂಲಿಕಾ ಪಾದುಕಾಪೂಜೆ, ಶ್ರೀಪೂಜೆ ನಡೆದವು. ಭಾನುವಾರ ಬೆಳಗ್ಗೆ ಶ್ರೀಪಾದುಕಾ ಪೂಜೆ, ಶ್ರೀಪೂಜೆ, ಶ್ರೀಗಳ ಆಶೀರ್ವಚನ ಮಂತ್ರಾಕ್ಷತೆಗಳು ನಡೆದವು. ವೇ.ಮೂ. ಈಶ್ವರ ಭಟ್ ಆಲಂಗಾರು, ಕೆ. ಶ್ರೀಪತಿ ಭಟ್, ಎಂ. ಚಂದ್ರಶೇಖರ, ವೆಂಕಟೇಶ್ ಉಪಾಧ್ಯಾಯ, ವಿನೋದ್ ಕುಮಾರ್, ದೇವಾನಂದ ಭಟ್ ಬೆಳುವಾಯಿ ಮತ್ತಿತರರು ಇದ್ದರು.
