Moodubidire: ವೆಲ್ಡರ್ ಆತ್ಮಹತ್ಯೆ
Tuesday, February 20, 2024
ಮೂಡುಬಿದಿರೆ: ಬನ್ನಡ್ಕದ ಎಸ್ಕೆಎಫ್ ಸಂಸ್ಥೆಯಲ್ಲಿ ವೆಲ್ಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಗದಗ ಮೂಲದ ಆನಂದ್ ಎಂಬವರ ಪುತ್ರ ಅರುಣ್ ಕುಮಾರ್(29) ಆತ್ಯಹತ್ಯೆ ಮಾಡಿಕೊಂಡ ಯುವಕ.
ಶನಿವಾರ ರಾತ್ರಿಯಿಂದ ರವಿವಾರ ಬೆಳಗಿನ ವರೆಗೆ ಯಾರ ಮೊಬೈಲ್ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಹೆತ್ತವರು ಅರುಣ್ ಅವರ ಸ್ನೇಹಿತನ ಮೊಬೈಲ್ಗೆ ಕರೆ ಮಾಡಿ ವಿಚಾರಿಸಿದಾಗ ಆತ ಆಲಂಗಾರಿನಲ್ಲಿರುವ ಬಾಡಿಗೆ ಮನೆಗೆ ಬಂದು ಕಿಟಕಿಯ ಮೂಲಕ ಒಳಗೆ ಇಣುಕಿ ನೋಡಿದಾಗ ಆತ್ಯಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಆತ್ಯಹತ್ಯೆ ಮಾಡಿಕೊಂಡಿರುವ ಅರುಣ್ಗೆ ಮದುವೆ ನಿಶ್ಚಿತಾರ್ಥವಾಗಿದೆ ಎನ್ನಲಾಗಿದೆ. ಆತ್ಯಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.