Siddapura: ಫೆ.4: ಮೆಟ್ಕಲ್ ಗುಡ್ಡೆ ಮಹಾಗಣಪತಿ ದೇವಸ್ಥಾನದ ವರ್ಧಂತ್ಯುತ್ಸವ
Saturday, February 3, 2024
ಸಿದ್ದಾಪುರ: ಉಡುಪಿ ಜಿಲ್ಲೆಯ ಹೊಸಂಗಡಿಯಿಂದ 6 ಕಿ.ಮೀ. ದೂರದಲ್ಲಿರುವ ಸಮುದ್ರ ಮಟ್ಟದಿಂದ 2000 ಅಡಿಗೂ ಮೆಲ್ಪಟ್ಟು ಎತ್ತರದಲ್ಲಿರುವ ಮೆಟ್ಕಲ್ ಗುಡ್ಡೆಯ ಶ್ರೀ ಮಹಾಗಣಪತಿ ದೇವಸ್ಥಾನದ ವರ್ಧಂತ್ಯುತ್ಸವವು ಫೆ. 4 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಬೆಳಿಗ್ಗೆ 10 ಗಂಟೆಯಿಂದ 108 ಕಾಯಿ ಗಣಹೋಮ, ಶ್ರೀ ನಾಗ ದೇವರಿಗೆ ಕಳಶಾಭಿಷೇಕ, ಸತ್ಯನಾರಾಯಣ ಪೂಜೆ, ಪಂಚ ರುದ್ರ ಹೋಮ, ಚೌಡಿಗೆ ನವಕ ಪ್ರದಾನ, ಗಣಪತಿ ದೇವರಿಗೆ ಪ್ರದಾನ ಕಲಾಶಾಬಿಷೇಕ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾ ಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಹಾಗೂ ಸಂಜೆ ಸ್ಥಳೀಯ ಭಜನಾ ಮಂಡಳಿ ಅವರಿಂದ ಕಾರ್ಯಕ್ರಮ ಜರುಗಲಿರುವುದೆಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


