Mangalore: ಮಾ.3: ಕುಂಭಕರ್ಣ ದೃಶ್ಯ ರೂಪಕ, ಸಹಸ್ರಲಿಂಗ ದರ್ಶನ

Mangalore: ಮಾ.3: ಕುಂಭಕರ್ಣ ದೃಶ್ಯ ರೂಪಕ, ಸಹಸ್ರಲಿಂಗ ದರ್ಶನ


ಮಂಗಳೂರು: ಮಾ.3 ರಂದು ಸಂಜೆ 6 ಗಂಟೆಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು ಶಾಖೆಯ ವತಿಯಿಂದ ಮಹಾಶಿವರಾತ್ರಿಯ ಪ್ರಯುಕ್ತ ಕುದ್ರೋಳಿ ದೇವಸ್ಥಾನ ರಸ್ತೆಯಲ್ಲಿ ಮೊರ್ ಮಾರ್ಕೆಟ್ ಹತ್ತಿರದ ಮೈದಾನದಲ್ಲಿ ಕುಂಭಕರ್ಣ ದೃಶ್ಯ ರೂಪಕ, ಸಹಸ್ರಲಿಂಗ ದರ್ಶನ ಹಾಗೂ ಸೃಷ್ಟಿ ಚಕ್ರ ರಹಸ್ಯ ಮುಂತಾದ ವಿಶೇಷ ಆಕರ್ಷಣೆಗಳ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಎಲ್ಲರಿಗೂ ಉಚಿತ ಪ್ರವೇಶವಿರುವ ಈ ಪ್ರದರ್ಶನದಲ್ಲಿ ಶಿವಧ್ಯಾನ ಕುರಿತಾಗಿ ಮಾಹಿತಿಯನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮಾ.3 ರಿಂದ ಮಾ.10 ರವರೆಗೆ ಬೆಳಿಗ್ಗೆ 9 ರಿಂದ ರಾತ್ರಿ 8 ಘಂಟೆಯವರೆಗೆ ಸಾರ್ವಜನಿಕ ವೀಕ್ಷಣೆಗಾಗಿ ಪ್ರದರ್ಶಿಸಲಾಗುವುದು. ಕುಂಭಕರ್ಣ ದೃಶ್ಯ ರೂಪಕ ಪ್ರದರ್ಶನದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ನೆರವೇರಿಸಲಿದ್ದಾರೆ.

ಅತಿಥಿಗಳಾಗಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಕುದ್ರೋಳಿಯ ಟ್ರಸ್ಟಿ ರವಿಶಂಕರ್ ಮಿಜಾರ್, ಪತ್ರಕರ್ತ ಪರಮಾನಂದ ಸಾಲ್ಯಾನ್ ಭಾಗವಹಿಸಲಿದ್ದಾರೆ. ಈಶ್ವರೀಯ ಸಂದೇಶವನ್ನು ಮಂಗಳೂರಿನ ಬ್ರಹ್ಮಾಕುಮಾರೀಸ್‌ನ ಸಂಚಾಲಕಿ ರಾಜಯೋಗಿ ಬ್ರಹ್ಮಾಕುಮಾರಿ ವಿಶ್ವೇಶ್ವರಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article