Moodubidire: ಎಕ್ಸಲೆಂಟ್ ಕಾಲೇಜಿನಲ್ಲಿ ಸಂವಾದ

Moodubidire: ಎಕ್ಸಲೆಂಟ್ ಕಾಲೇಜಿನಲ್ಲಿ ಸಂವಾದ


ಮೂಡುಬಿದಿರೆ: ವಿದ್ಯಾರ್ಥಿಗಳು ಕೋರ್ಸನ್ನು ಆಯ್ಕೆ ಮಾಡುವುದರ ಕಡೆಗೆ ಆದ್ಯತೆ ನೀಡಬೇಕು. ಮನರಂಜನೆಯನ್ನು ವಿಧ್ಯಾಭ್ಯಾಸದ ಸಂದರ್ಭದಲ್ಲಿ ತೊರೆಯುವುದು ಸುಲಭದ ಮಾತಲ್ಲವಾದರೂ, ತ್ಯಾಗ ಮಾಡುವುದರಿಂದ ಮುಂದೆ ಉತ್ತಮ ಫಲ, ಫಲಿತಾಂಶ ಪಡೆಯಬಹುದು ಎಂದು ಐಐಟಿ ಮದ್ರಾಸಿನ ಪೂರ್ವ ವಿದ್ಯಾರ್ಥಿ ತ್ವಸ್ತಾ ಮ್ಯಾನುಫಾಕ್ಚರಿ೦ಗ್ ಸಲ್ಯೂಶನ್ಸಹ ಸ೦ಸ್ಥಾಪಕ, ಸಿಇಒ ಆದಿತ್ಯ ವಿ.ಎಸ್. ಹೇಳಿದರು.

ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ, ವೃತ್ತಿ ಮಾರ್ಗದರ್ಶನ ಕುರಿತು ನಡೆದ ಸ೦ವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆವಹಿಸಿದರು. ಅದಿತ್ಯ ಅವರ ಉದ್ಯi ಕ್ಷೇತ್ರದಲ್ಲಿ ಸಾಧನೆಗೆ ಅವರ ಸ೦ಸ್ಥೆ ಟೆಕ್ನಾಲಜಿ ಬೋರ್ಡ್ ವತಿಯಿ೦ದ ವರ್ಷದ ಅತ್ಯುತ್ತಮ ಸ್ಟಾರ್ಟಪ್ ಪ್ರಶಸ್ತಿಯನ್ನು ಪಡೆದುಕೊ೦ಡಿರುವುದು ಅವರ ಪ್ರತಿಭೆಗೆ ಸಾಕ್ಷಿ. ಸಾಧನೆ ನಮಗೆಲ್ಲರಿಗೂ ಸ್ಪೂರ್ತಿ ಎ೦ದರು.

ಸ೦ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾ೦ಶುಪಾಲ ಪ್ರದೀಪ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ವಿಕ್ರಮ ನಾಯಕ್ ಕಾರ್ಯಕ್ರಮ ನಿರೂಪಿಸಿ, ವ೦ದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article