Ujire: ರಾಜ್ಯಮಟ್ಟದ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಎಸ್ಡಿಎಂ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಭಾರಿ ಸಾಧನೆ
Wednesday, May 29, 2024
ಉಜಿರೆ: ಜನವರಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ 2023-2024ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಪಕರ ಅರ್ಹತಾ ಪರೀಕ್ಷೆಯಲ್ಲಿ ಉಜಿರೆ ಎಸ್ಡಿಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಏಳು ವಿದ್ಯಾರ್ಥಿಗಳು ಮತ್ತು ಮೂರು ಅಧ್ಯಪಕರು ತೇರ್ಗಡೆ ಹೊಂದಿದ್ದಾರೆ. ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಭ್ಯರ್ಥಿಗಳ ಅರ್ಹತೆಯನ್ನು ನಿರ್ಧರಿಸಲು ಈ ಪರೀಕ್ಷೆ ಪ್ರಮುಖವಾಗಿದ್ದು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಶಾಮ್ ಪ್ರಸಾದ್ ಎಚ್.ಪಿ., ಬಿ. ವೊಕ್ ವಿಭಾಗದ ಅಧ್ಯಾಪಕ ಇಂದುದರ್ ಕಿಣಿ, ರಸಾಯನ ಶಾಸ್ತ್ರ ವಿಷಯದಲ್ಲಿ ಅಧ್ಯಪಾಕ ಡಾ. ನವೀನ್ ಜೈನ್, ಜೀವ ವಿಜ್ಞಾನ ವಿಷಯದಲ್ಲಿ ಅಧ್ಯಾಪಕಿ ಮಂಜುಶ್ರೀ, ವಾಣಿಜ್ಯಶಾಸ್ತ್ರ ವಿಷಯದಲ್ಲಿ ವಿದ್ಯಾರ್ಥಿಗಳಾದ ಶ್ರಾವ್ಯ, ಮನೋಜ್, ಸಂಪ್ರಿತಾ, ಸ್ವಾತಿ ಕೆ.ಎ, ಶಿವಪ್ರಸಾದ್, ಶಾಲಿನಿ, ತೇರ್ಗಡೆ ಹೊಂದಿ ಸಾಧನೆ ಮೆರೆದಿದ್ದಾರೆ.
ವಿದ್ಯಾರ್ಥಿಗಳು ಮತ್ತು ಆಧ್ಯಾಪಕರ ಈ ಸಾಧನೆಯನ್ನು ಸಂಸ್ಥೆಯ ಪ್ರಾಂಶುಪಾಲ ಬಿ.ಎ. ಕುಮಾರ ಹೆಗ್ಡೆ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.