Moodubidire: 45ನೇ ವಾರ್ಷಿಕೋತ್ಸವ ‘ಧವಳಾ ಡೇ’

Moodubidire: 45ನೇ ವಾರ್ಷಿಕೋತ್ಸವ ‘ಧವಳಾ ಡೇ’

ವಿದ್ಯಾರ್ಥಿಗಳು ಸ್ಮಾಟ್೯, ಹ್ಯಾಪಿ ಮತ್ತು ರಿಚ್ ಆಗಿರಿ: ಚೇತನಾ ಹೆಗ್ಡೆ


ಮೂಡುಬಿದಿರೆ: ವಿದ್ಯಾರ್ಥಿಗಳು ಕೇವಲ ಸೌಂದರ್ಯದಿಂದ ಮಾತ್ರ ಸ್ಮಾಟ್೯ ಆಗಿರುವುದಲ್ಲ ಬದಲಾಗಿ ಉತ್ತಮ ಯೋಚನೆಗಳಿಂದ ಸ್ಮಾಟ್ ಆಗಿರಿ. ಹಣದಿಂದ ರಿಚ್ ಆಗದೆ ಹೃದಯ, ಮಾನವೀಯ ಗುಣ, ನಿಷ್ಠೆ ಮತ್ತು ವ್ಯಕ್ತಿತ್ವದೊಂದಿಗೆ ಶ್ರೀಮಂತರಾಗಿರಿ ಮತ್ತು ಇನ್ನೊಬ್ಬರ ಬಗ್ಗೆ ಅಸೂಯೆ ಪಡದೆ ಹ್ಯಾಪಿಯಾಗಿರುವುದನ್ನು ಕಲಿಯಿರಿ ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿನಿ ಚೇತನಾ ಹೆಗ್ಡೆ ಹೇಳಿದರು.

ಅವರು ಧವಳಾ ಕಾಲೇಜಿನಲ್ಲಿ ನಡೆದ 45ನೇ ವರ್ಷದ ವಾರ್ಷಿಕೋತ್ಸವ ‘ಧವಳಾ ಡೇ’ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಆತ್ಮವಿಶ್ವಾಸದೊಂದಿಗೆ ಮುನ್ನಡೆಯಿರಿ ಎಂದ ಅವರು ನಿಮ್ಮಿಂದಾಗಿ ನಿಮ್ಮ ಹೆತ್ತವರು, ಶಿಕ್ಷಕರು ಇನ್ನೊಬ್ಬರ ಮುಂದೆ ತಲೆ ತಗ್ಗಿಸುವಂತೆ ಮಾಡದಿರಿ ಎಂದು ಸಲಹೆ ನೀಡಿದರು.

ಎಂಆರ್‌ಪಿಎಲ್‌ನ ಆಡಳಿತಾಧಿಕಾರಿ ಮನೋಜ್ ಕುಮಾರ್ ಎ. ಅವರು ಅತಿಥಿಯಾಗಿ ಭಾಗವಹಿಸಿ ಕ್ರೀಡಾ ಸಾಧಕರನ್ನು ಗೌರವಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ವಯಂ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಮತ್ತು ಶಿಕ್ಷಣದ ಜತೆಗೆ ಸ್ಪರ್ಧಾತ್ಮಕ ಯುಗಕ್ಕೆ ಬೇಕಾದಂತಹ ಕೌಶಲಗಳನ್ನು ಅಳವಡಿಸಿಕೊಳ್ಳಬೇಕೆಂದ ಅವರು ಎಂಆರ್‌ಪಿಎಲ್ ಸಂಸ್ಥೆಯು ಸಮಾಜ ಸೇವೆಗೂ ಆದ್ಯತೆಯನ್ನು ನೀಡುತ್ತಿದೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯಗಳನ್ನೂ ಒದಗಿಸುತ್ತಿದೆ ಎಂದು ಹೇಳಿದರು.

ಆಡಳಿತ ಮಂಡಳಿಯ ಸಂಚಾಲಕ ಹೇಮರಾಜ್ ಅಧ್ಯಕ್ಷತೆ ವಹಿಸಿ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು.

ಗೌರವ: ಎಂಆರ್‌ಪಿಎಲ್‌ನ ಆಡಳಿತಾಧಿಕಾರಿ ಮನೋಜ್ ಕುಮಾರ್ ಅವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಇಂದ್ರ, ಉಪನ್ಯಾಸಕಿ, ಕಾರ್ಯಕ್ರಮದ ಸಂಯೋಜಕಿ ಮಲ್ಲಿಕಾ ರಾವ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಕೇತ್ ಭಂಡಾರಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪಾಶ್ವ೯ನಾಥ ಅಜ್ರಿ ಸ್ವಾಗತಿಸಿ, ಡಾ. ರೂಪಾ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ರಾಹುಲ್ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.







Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article