ರಾಷ್ಟ್ರೀಯ ಹೆದ್ದಾರಿ 169 ಸಂಪರ್ಕ ಕಲ್ಪಿಸುವ ಉಳೖಬೆಟ್ಟು ಸೇತುವೆ ಸಂಚಾರ ಸ್ಥಗಿತ: ಡಿ.ವೈ.ಎಫ್.ಐ. ನಿಯೋಗ ಭೇಟಿ

ರಾಷ್ಟ್ರೀಯ ಹೆದ್ದಾರಿ 169 ಸಂಪರ್ಕ ಕಲ್ಪಿಸುವ ಉಳೖಬೆಟ್ಟು ಸೇತುವೆ ಸಂಚಾರ ಸ್ಥಗಿತ: ಡಿ.ವೈ.ಎಫ್.ಐ. ನಿಯೋಗ ಭೇಟಿ


ಮಂಗಳೂರು: ಉಳೖಬೆಟ್ಟು, ಪೆರ್ಮಂಕಿ, ಮೂಡುಜಪ್ಪು ಗ್ರಾಮಗಳನ್ನು ರಾಷ್ಟ್ರೀಯ ಹೆದ್ದಾರಿ 169ಕ್ಕೆ ಸಂಪರ್ಕ ಕಲ್ಪಿಸುವ ಉಳೖಬೆಟ್ಟು ಸೇತುವೆಯು ಶಿಥಿಲಾವಸ್ಥೆಗೆ ತಲುಪಿದ್ದು, ಈ ಕಾರಣಕ್ಕಾಗಿ ಘನ ವಾಹನಗಳ ಸಂಚಾರ ನಿಷೇದಿಸಲಾಗಿದೆ. ಇಂದು ಈ ಪ್ರದೇಶಕ್ಕೆ ಡಿ.ವೈ.ಎಫ್.ಐ. ವಾಮಂಜೂರು ಪ್ರದೇಶ ಸಮಿತಿಯ ನಿಯೋಗವು ಭೇಟಿ ನೀಡಿದ್ದು, ಸ್ಥಳಿರಲ್ಲಿ ಸಮಸ್ಯೆಯ ಕುರಿತು ಚರ್ಚಿಸಿತು. 

ಉಳೖಬೆಟ್ಟು ಸೇತುವೆಯ ಸಂಚಾರ ನಿರ್ಬಂಧದಿಂದಾಗಿ ಬಸ್, ಸ್ಕೂಲ್ ಬಸ್ ಮತ್ತು ಘನ ವಾಹನಗಳ ಸಂಚಾರ ಸಾಧ್ಯವಾಗದೆ, ಸಾರ್ವಜನಿಕರು ಪರದಾಡುವಂತಾಗಿದೆ. 

ಈ ಪ್ರದೇಶದಿಂದ ವಾಮಂಜೂರು, ಗುರುಪುರ, ಕೖಕಂಬ ಪ್ರದೇಶಗಳಿಗೆ ಶಿಕ್ಷಣಕ್ಕಾಗಿ ಸಾಗುವ ವಿಧ್ಯಾರ್ಥಿಗಳಿಗೆ ಮತ್ತು ಕೆಲಸಕ್ಕೆ ಆಶ್ರಯಿಸಿರುವ ಜನರಿಗೆ ಸಂಚಾರವು ತ್ರಾಸದಾಯಕವಾಗಿದ್ದು, ನಿತ್ಯ ಸುತ್ತುಬಳಸಿ ರಾಷ್ಟ್ರೀಯ ಹೆದ್ದಾರಿಯನ್ನು ತಲುಪುವ ಸ್ಥಿತಿ ಇಲ್ಲಿನ ಜನತೆಗೆ ಎದುರಾಗಿದ್ದು, ಸೇತುವೆ ಸ್ಥಗಿತಗೊಂಡು ತಿಂಗಳುಗಳು ಕಳೆದರೂ ಕೂಡ ಬದಲೀ ವ್ಯವಸ್ಥೆ ಅಥವಾ ನೂತನ ಸೇತುವೆ ನಿರ್ಮಾಣದ ಕುರಿತು ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಚಕಾರವೆತ್ತುತ್ತಿಲ್ಲ. ಈ ಕುರಿತು ಕೂಡಲೇ ಜಿಲ್ಲಾಡಳಿತ ಗಮನ ಹರಿಸಿ ಕ್ರಮ ಕೖಗೊಳ್ಳಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿ.ವೈ.ಎಫ್.ಐ. ಒತ್ತಾಯಿಸುತ್ತದೆ.

ಭಾರತ ಪ್ರಜಾಸತ್ಮಕ ಯುವಜನ ಫೆಡರೇಶನ್ ನ ಜಿಲ್ಲಾ ಜೊತೆ ಕಾರ್ಯದರ್ಶಿ ಹಾಗೂ ವಕೀಲರಾದ ಮನೋಜ್ ವಾಮಂಜೂರು, ಡಿ.ವೈ.ಎಫ್.ಐ. ವಾಮಂಜೂರು ಪ್ರದೇಶ ಅಧ್ಯಕ್ಷ ಚಂದ್ರಹಾಸ್ ತಾರಿಗುಡ್ಡ, ಕಾರ್ಯದರ್ಶಿ ದಿನೇಶ್ ಬೊಂಡಂತಿಲ, ಮುಖಂಡರಾದ ಆಶೋಕ್ ಬಂಗೇರ, ಸಿಲ್ವರ್ ಕೋಡಿ, ಜಯಶೀಲ, ಜಿತೇಶ್ ದೇವಸಬೆಟ್ಟು, ಮಹೇಶ್ ಬೊಂಡಂತಿಲ ಉಪಸ್ಥಿತರಿದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article