ಈಜಲು ತೆರಳಿ ಇಬ್ಬರು ಯುವಕರು ನಾಪತ್ತೆ

ಈಜಲು ತೆರಳಿ ಇಬ್ಬರು ಯುವಕರು ನಾಪತ್ತೆ

ಮಂಗಳೂರು: ನದಿಯಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನಾಪತ್ತೆಯಾಗಿರುವ ಘಟನೆ ಮಂಗಳೂರು ಹೊರವಲಯದ ಮರವೂರು ಎಂಬಲ್ಲಿ ನಡೆದಿದೆ.

ಸಂಜೆ‌ ಫಲ್ಗುಣಿ ನದಿಗೆ ಈಜಲು ತೆರಳಿದ್ದ ನಾಲ್ವರು ಯುವಕರುಗಳಾದ ಅರುಣ್, ದೀಕ್ಷಿತ್, ಸುಮಿತ್, ಅನೀಶ್ ನೀರಿನ ಸೆಳತಕ್ಕೆ ಸಿಲುಕಿ ಮುಳುಗಿದ್ದು, ಇವರುಗಳಲ್ಲಿ ಕೊಟ್ಟಾರ ಚೌಕಿಯ ಸುಮಿತ್ (20), ಉರ್ವಸ್ಟೋರ್ ನ ಅನೀಶ್ (19) ನಾಪತ್ತೆಯಾಗಿದ್ದಾರೆ.

ಮಾಹಿತಿ ತಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಹಾಗು ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ನಡೆಸಿದ್ದಾರೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article