ರಿಕ್ಷಾ ಪಾರ್ಕಿನ ಸಮಸ್ಯೆ ಬಗೆಹರಿಸಲು ಮನವಿ
Wednesday, September 25, 2024
ಮಂಗಳೂರು: ತೊಕ್ಕೊಟ್ಟು ರಿಕ್ಷಾ ಪಾರ್ಕಿನ ಸಮಸ್ಯೆಯನ್ನು ಬಗೆಹರಿಸಲು ಸಾರಿಗೆ ಅಧಿಕಾರಿಯವರಿಗೆ ಹಾಗೂ ಸಂಚಾರಿ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ಎಫ್‌ಕೆಎಆರ್‌ಡಿಯು) ಉಳ್ಳಾಲ ತಾಲೂಕು ಸಮಿತಿಯು ಇಂದು ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಎಫ್‌ಕೆಎಆರ್‌ಡಿಯು ಉಳ್ಳಾಲ ತಾಲೂಕು ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರುಗಳು ಉಪಸ್ಥಿತರಿದ್ದರು.
