ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ ತಂಡಕ್ಕೆ ರಾಜ್ಯ ಮಟ್ಟದ ತಾಂತ್ರಿಕ ಮಾದರಿ ಪ್ರದರ್ಶನದಲ್ಲಿ ಪ್ರಥಮ ಬಹುಮಾನ

ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ ತಂಡಕ್ಕೆ ರಾಜ್ಯ ಮಟ್ಟದ ತಾಂತ್ರಿಕ ಮಾದರಿ ಪ್ರದರ್ಶನದಲ್ಲಿ ಪ್ರಥಮ ಬಹುಮಾನ


ಮೂಡುಬಿದಿರೆ: ಮಂಗಳೂರಿನ ಕರ್ನಾಟಕ ( ಸರ್ಕಾರಿ) ಪಾಲಿಟೆಕ್ನಿಕ್ ನಲ್ಲಿ ಸೆ.26 ರಂದು ಆಯೋಜಿಸಲಾಗಿದ್ದ ಐ.ಎಸ್.ಟಿ.ಇ ನಾಲ್ಕನೇ  ರಾಜ್ಯ ಮಟ್ಟದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಮಾವೇಶದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ತಾಂತ್ರಿಕ ಮಾದರಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಎಸ್ ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ತಂಡವು ತಯಾರಿಸಿದ 'ಐ.ಓ.ಟಿ. ಆಧರಿತ ಇಂಡಸ್ಟ್ರಿಯಲ್ ಬಾಯ್ಲರ್ ನಿರ್ವಹಣೆ ಹಾಗೂ ಸುರಕ್ಷಾ ವ್ಯವಸ್ಥೆ'  ಎನ್ನುವ ತಾಂತ್ರಿಕ ಮಾದರಿಯು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. 

ವಿದ್ಯಾರ್ಥಿಗಳಾದ ವೀರಟ್, ಋತಿಕ್, ರಕ್ಷಿತ್ ಹಾಗೂ ಯತೀಶ್ ಅವರನ್ನೊಳಗೊಂಡ ತಂಡವು ನಿರ್ಮಿಸಿದ ಸೆನ್ಸರ್ ಗಳು ಹಾಗೂ ಕಂಟ್ರೋಲರ್ ನ್ನು ಬಳಸಿ ಪೂರ್ಣ ಸುರಕ್ಷತೆ ಒದಗಿಸಬಲ್ಲ ಬಾಯ್ಲರ್ ನಿರ್ವಹಣಾ ತಂತ್ರಜ್ಞಾನವು ಎಲ್ಲರ ಗಮನ ಸೆಳೆದಿದೆ.  ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಹಾಗೂ ಉಪನ್ಯಾಸಕ ವೃಂದದವರು  ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article