ಪಡುಬಿದ್ರಿ ಬೀಚ್‌ನಲ್ಲಿ ಸ್ವಚ್ಚತಾ ಮಾಹಿತಿ
ಪಡುಬಿದ್ರಿ: ವಿಶ್ವ ಪ್ರವಾಸೋಧ್ಯಮ ದಿನಾಚರಣೆ ಪ್ರಯುಕ್ತ ಪ್ರವಾಸೋಧ್ಯಮ ಮತ್ತು ಶಾಂತಿ ಎಂಬ ಸಂದೇಶದೊಂದಿಗೆ ಸ್ವಭಾವ ಸ್ವಚ್ಚತಾ ಸಂಸ್ಕಾರ ಸ್ವಚ್ಚತಾ ಎಂಬ ಧ್ಯೇಯೋದ್ದೇಶದೊಂದಿಗೆ ಸ್ವಚ್ಚತಾ ಹೀ ಸೇವಾ 2024 ಕಾರ್ಯಕ್ರಮ ಪಡುಬಿದ್ರಿ ಬೀಚ್‌ನಲ್ಲಿ ಶನಿವಾರ ನಡೆಯಿತು.
ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ವಿಶ್ರುದ್ ಕೋಸ್ಟಲ್ ಡೆವಲಪರ್ಸ್ ಇವರ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಪಡುಬಿದ್ರಿ ಎಸ್‌ಐ ಪ್ರಸನ್ನ ಕುಮಾರ್ ಚಾಲನೆ ನೀಡಿ ಪರಿಸರವನ್ನು ಸ್ವಚ್ಚವಾಗಿಡುವುದರಿಂದ ಊರು ಸ್ವಚ್ಛವಾಗಿಡಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಸ್ಚಚ್ಚತೆಗೆ ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ಕಾಡಿಪಟ್ಣ-ನಡಿಪಟ್ಣ ವಿದ್ಯಾಪ್ರಸಾರ ಸಂಘದ ಅಧ್ಯಕ್ಷ ಸುಕುಮಾರ್ ಶ್ರೀಯಾನ್ ಮಾತನಾಡಿ, ಇಂದು ರಾಜ್ಯದ ಕರಾವಳಿಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೀಚ್‌ಗೆ ಭೇಟಿ ನೀಡುತಿದ್ದಾರೆ. ಈ ವೇಳೆ ಬೀಚ್ ಸ್ವಚ್ಚವಾಗಿಡುವುದರಿಂ ಬೀಚ್ ಪ್ರವಾಸೋಧ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಪಡುಬಿದ್ರಿಯ ಮುಖ್ಯಬೀಚ್ ಹಾಗೂ ಬ್ಲೂಫ್ಲ್ಯಾಗ್ ಬೀಚ್ ಪ್ರವಾಸಿಗರನ್ನು ಆಕರ್ಷಿಸಲು ಬಹು ಮುಖ್ಯ ಕಾರಣವಾಗಿದೆ ಎಂದರು.
ಪಡುಬಿದ್ರಿ-ನಡಿಪಟ್ಣ ಮೊಗಗವೀರ ಸಭೆಯ ಅಧ್ಯಕ್ಷ ಅಶೋಕ್ ಸಾಲ್ಯಾನ್, ಹೆಜಮಾಡಿ ಕರಾವಳಿ ಕಾವಲು ಪಡೆಯ ರತ್ನಾಕರ, ಬ್ಲೂಫ್ಲ್ಯಾಗ್ ಬೀಚ್‌ನ ಮ್ಯಾನೇಜರ್ ವಿಜಯ ಕುಮಾರ್ ಶೆಟ್ಟಿ, ಪಡುಬಿದ್ರಿ ಕೆಪಿಎಸ್ ಪದವಿ ಪೂರ್ವ ವಿಭಾಗದ ಸುಜಾತಾ, ವಿಶ್ರುದ್ ಕೋಸ್ಟಲ್ ಡೆವಲಪರ್ಸ್‌ನ ಮುಖ್ಯಸ್ಥ ಸುದೀಶ್ ಉಪಸ್ಥಿತರಿದ್ದರು.
ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.