
ಬಿಗ್‌ಬಾಸ್ ಕಾರ್ಯಕ್ರಮದಿಂದ ಚೈತ್ರಾ ಕುಂದಾಪುರ ಹೊರಕಳಿಸುವಂತೆ ನೋಟಿಸ್
ಕುಂದಾಪುರ: ಬಿಗ್‌ಬಾಸ್ ಮನೆಯಿಂದ ಚೈತ್ರ ಕುಂದಾಪುರ ಅವರನ್ನು ಆದಷ್ಟು ಬೇಗ ಹೊರ ಹಾಕುವಂತೆ ಕಲರ್ಸ್ ವಾಹಿನಿಗೆ ವಕೀಲರು ನೋಟಿಸ್ ನೀಡಿದ್ದಾರೆ.
ಈ ಕುರಿತು ಖ್ಯಾತ ವಕೀಲರಾದ ಭೋಜರಾಜ್ ಅವರು ಮಾತನಾಡಿ, ಸಮಾಜದ ಮೇಲೆ ದುಷ್ಪರಿಣಾಮ ಬೀರಬಹುದಾದ, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ ವಾಹಿನಿ ಸಮಾಜಕ್ಕೆ ಏನು ಸಂದೇಶ ನೀಡಬಹುದು? ಇದು ತಪ್ಪು ಸಂದೇಶ ರವಾನಿಸುತ್ತದೆ.
ಈಕೆಯ ಮೇಲೆ ದೊಂಬಿ, ಗಲಾಟೆ, ಚೀಟಿಂಗ್ ಸೇರಿ 11 ಕೇಸ್‌ಗಳು ದಾಖಲಾಗಿವೆ. ಅದಲ್ಲದೆ ಉದ್ಯಮಿಗೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಐದು ಕೋಟಿಗೂ ಹೆಚ್ಚು ಹಣವನ್ನು ಡಿಮಾಂಡ್ ಇಟ್ಟಿದ್ದಾರೆ. ಈಕೆ ಚೈತ್ರ ಕುಂದಾಪುರ ಹೆಸರು ಎಲ್ಲಿಯೂ ಬರಬಾರದು ಎಂದು ಕೋರ್ಟ್‌ಗೆ ಹೋಗಿರುತ್ತಾಳೆ. ವಾಹಿನಿಯವರು ಚೈತ್ರ ಕುಂದಾಪುರ ಅವರನ್ನು ಬಳಸಿಕೊಂಡು ಸಮಾಜಕ್ಕೆ ಯಾವ ಸಂದೇಶ ನೀಡ ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಆದಷ್ಟು ಬೇಗ ಅವರನ್ನು ಬಿಗ್‌ಬಾಸ್ ಮನೆಯಿಂದ ಹೊರಗೆ ಕಳಿಸುವಂತೆ ನೋಟಿಸ್ ನೀಡಿದ್ದಾರೆ. ಮುಂದಿನ ಬೆಳವಣಿಗೆಗಾಗಿ ಕಾಯಲಾಗಿದೆ.