ದೈಹಿಕ, ಮಾನಸಿಕ ಕ್ಷಮತೆಗೆ ಕ್ರೀಡೆ ಪೂರಕ: ಮೆಸ್ಕಾಂ ಎಂಡಿ ಡಿ. ಪದ್ಮಾವತಿ

ದೈಹಿಕ, ಮಾನಸಿಕ ಕ್ಷಮತೆಗೆ ಕ್ರೀಡೆ ಪೂರಕ: ಮೆಸ್ಕಾಂ ಎಂಡಿ ಡಿ. ಪದ್ಮಾವತಿ


ಮಂಗಳೂರು: ಕ್ರೀಡೆಯಿಂದ ದೈಹಿಕ, ಮಾನಸಿಕ ಕ್ಷಮತೆ ವೃದ್ಧಿಯಾಗುತ್ತದೆ. ಅದುದರಿ೦ದ ಪ್ರತಿಯೋವ೯ರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ಹೇಳಿದರು.

ಮಂಗಳೂರು ವಿದ್ಯುತ್ ಸರಬರಾಜು ಕ೦ಪೆನಿ ನಿಯಮಿತ (ಮೆಸ್ಕಾಂ) ಮಂಗಳೂರು ವಲಯದ ಬ್ಯಾಡ್ಮಿಂಟನ್ ಸೀಜನ್-೩ ಪಂದ್ಯಾಟವನ್ನು ಅವರು ನಗರದ ಪಫೆ೯ಟ್ ಪಾಸ್ ಕ್ರೀಡಾಂಗಣದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಮೆಸ್ಕಾಂ ಕ್ರೀಡಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇಂದು ಬ್ಯಾಡ್ಮಿಂಟನ್ ಪಂದ್ಯಾಟ ಉತ್ತಮ ರೀತಿಯಲ್ಲಿ ಆಯೋಜನೆಗೊಂಡಿದೆ. ಇದೇ ರೀತಿ ಇನ್ನೂ ಹೆಚ್ಚಿನ ಕ್ರೀಡಾಕೂಟಗಳು ಆಯೋಜನೆಗೊಳ್ಳಲಿ ಎಂದರು.

ಪಂದ್ಯಾಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಅವರು ಶುಭ ಹಾರೈಸಿದರು. 

ತಾಂತ್ರಿಕ ನಿರ್ದೇಶಕ ಕೆ.ಎಂ. ಮಹಾದೇವ ಸ್ವಾಮಿ ಪ್ರಸಾದ ಅವರು ಕ್ರೀಡಾಪಟುಗಳಿಗೆ ಶುಭ ಹಾರೈಸಿ, ‘ಸಾಧಿಸುವ ಛಲ, ಪರಿಶ್ರಮ ಮತ್ತು ಸಮಪ೯ಣಾ ಮನೋಭಾವದಿಂದ ತೊಡಗಿಸಿಕೊಂಡಾಗ ಕ್ರೀಡೆಯಲ್ಲಿ ಯಶಸ್ಸು ಸಾಧ್ಯ. ಸೋಲು, ಗೆಲುವು ಇದ್ದದ್ದೆ. ಸೋಲು ಬಂದಾಗ ಕುಗ್ಗದೆ ಅದನ್ನೇ ಗೆಲುವಿಗೆ ಸೋಪಾನವಾಗಿಸಿಕೊಂಡು ಮುನ್ನಡೆಯಬೇಕು ಎಂದರು.

ಮುಖ್ಯ ಆರ್ಥಿಕ ಅಧಿಕಾರಿ ಮೌರೀಸ್ ಡಿ’ಸೋಜ, ಆರ್ಥಿಕ ಸಲಹೆಗಾರ ಬಿ. ಹರಿಶ್ಚಂದ್ರ, ಮಂಗಳೂರು ವಲಯ ಮುಖ್ಯ ಎಂಜಿನಿಯರ್ ರವಿಕಾಂತ ಕಾಮತ್, ಪ್ರಧಾನ ವ್ಯವಸ್ಥಾಪಕ ಉಮೇಶ್, ತಂಡಗಳ ವ್ಯವಸ್ಥಾಪಕರು, ಸೂಪರಿಂಟೆಂಡೆಂಟ್ ಎಂಜಿನಿಯರ್‌ಗಳಾದ ಹರೀಶ್ ಕುಮಾರ್, ರಮೇಶ್ ಉಪಸ್ಥಿತರಿದ್ದರು.

ಬ್ಯಾಡ್ಮಿಂಟನ್ ಸೀಜನ್-೩ ಪಂದ್ಯಾಟ ಆಯೋಜನಾ ಸಮಿತಿಯ ಪ್ರಭಾತ್ ಜೋಶಿ ಅವರು ಪಂದ್ಯಾಟದ ಸ್ವರೂಪದ ಕುರಿತು ಮಾಹಿತಿ ನೀಡಿದರೆ, ದೀಪಕ್ ನಿಯಮಗಳ ಬಗ್ಗೆ ವಿವರಿಸಿದರು.

ಸೀಮಾ ಎಂ.ಆರ್. ಅವರು ಸ್ವಾಗತಿಸಿ, ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article