ಮಂಗಳೂರು ದಸರಾ: ಮದ್ಯ ಮಾರಾಟ ನಿಷೇದ
Tuesday, October 1, 2024
ಮಂಗಳೂರು: ಜಿಲ್ಲೆಯಲ್ಲಿ ನವರಾತ್ರಿಉತ್ಸವದಆಚರಣೆಯಹಿನ್ನಲೆಯಲ್ಲಿಅಕ್ಟೋಬರ್ 3ರಿಂದ 13ರವರೆಗೆ ಸಾವಿರಾರು ಸಂಖ್ಯೆಯಲ್ಲಿಜನರು ಶಾರದಾದೇವಿಯ ವಿಗ್ರಹ ಪ್ರತಿಷ್ಠಾಪನ ಮತ್ತು ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಸಮಯದಲ್ಲಿ ಕಿಡಿಗೇಡಿಗಳು ಅಮಲು ಪದಾರ್ಥ ಸೇವಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಕಾಪಾಡುವ ಹಿತದೃಷ್ಟಿಯಿಂದದಸರಾ ಮೆರವಣಿಗೆ ಸಾಗುವ ಪ್ರದೇಶಗಳಲ್ಲಿ ಆಯಾ ದಿನಗಳಂದು ಬಾರ್ ಮತ್ತು ವೈನ್ ಶಾಪ್ ಮದ್ಯದ ಅಂಗಡಿಗಳಲ್ಲಿ ಅಮಲು ಪದಾರ್ಥ ಮಾರಾಟ ಮಾಡದಂತೆ ಮತ್ತು ಮುಚ್ಚಲು ಹಾಗೂ ಈ ಸಮಯದಲ್ಲಿ ಎಲ್ಲಾ ಶೇಂದಿ ಅಂಗಡಿ ಮತು ಎಲ್ಲಾ ವಿಧದ ಅಮಲು ಪದಾರ್ಥಗಳ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಆದೇಶಿಸಿದ್ದಾರೆ.