
ಇಂದಿನಿಂದ ಸೇವಾ ಭಾರತಿ ವತಿಯಿಂದ ದೀಪಾವಳಿ ಹಣತೆ ಪ್ರದರ್ಶನ ಮತ್ತು ಮಾರಾಟ
Tuesday, October 22, 2024
ಮಂಗಳೂರು: ಸೇವಾ ಭಾರತಿ (ರಿ) ಇದರ ಅಂಗಸಂಸ್ಥೆ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ಅ.21 ರಿಂದ ನ.1 ರವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ದೀಪಾವಳಿ ಹಣತೆಯ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಮಂಗಳೂರಿನ ವಿ.ಟಿ. ರಸ್ತೆಯ ಚೇತನಾ ಬಾಲ ವಿಕಾಸ ಕೇಂದ್ರದ ವಿಶೇಷ ಚೇತನ ಮಕ್ಕಳಿಂದ ತಯಾರಾದ ದೀಪಾವಳಿ ಹಣತೆಯನ್ನು ನಾವು ಸಾರ್ವಜನಿಕರಿಗೋಸ್ಕರ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಇವುಗಳ ವಿಶೇಷತೆಯೇನೆಂದರೆ, ಈ ಹಣತೆಗೆ ಬಣ್ಣ ನೀಡಿ ಅದನ್ನು ಆಕರ್ಷಣೀಯವಾಗಿ ಕಾಣುವಂತೆ ಮಾಡಿರುವುದು ನಮ್ಮ ವಿಶೇಷ ಚೇತರ ಮಕ್ಕಳು.
ಈ ವರ್ಷ ನಾವು ಹೆಚ್ಚುವರಿಯಾಗಿ ವಿವಿಧ ವಿನ್ಯಾಸದ ದೀಪಗಳನ್ನು ವಿಶೇಷವಾಗಿ ತಯಾರು ಮಾಡಿದ್ದೇವೆ. ಇವುಗಳಲ್ಲದೆ ಮಕ್ಕಳು ಮಾಡಿದಂತಹ ಕೈಚೀಲಗಳು, ಪರ್ಸ್, ಹೂಗಳ ವಿವಿಧ ವಿನ್ಯಾಸಗಳು, ಇತರ ಕರಕುಶಲ ವಸ್ತುಗಳು ಮಾರಟಕ್ಕೆ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.