60ನೇ ಷಷ್ಠಿಪೂರ್ತಿ ಸಮಾರೋಪ ಸಮಾರಂಭ

60ನೇ ಷಷ್ಠಿಪೂರ್ತಿ ಸಮಾರೋಪ ಸಮಾರಂಭ


ಮೂಲ್ಕಿ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಮೂಲ್ಕಿ ಪ್ರಖಂಡ ನೇತೃತ್ವದಲ್ಲಿ ಕಾರ್ನಾಡು ಹರಿಹರ ದೇವಸ್ಥಾನದ ಸಭಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ದಿನಾಚರಣೆ ಅಂಗವಾಗಿ 60ನೇ ಷಷ್ಠಿಪೂರ್ತಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದಲ್ಲಿ ಸಂಘಟನೆಯ ಅವಶ್ಯಕತೆ ಇದೆ, ಯುವ ಜನಾಂಗ ಹಿಂದೂ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧಕರಾಗಬೇಕಾಗಿದೆ ಎಂದು ಹೇಳಿದರು.

ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ದಿಕ್ಸೂಚಿ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ವಿದ್ಯಾಧರ ಶೆಟ್ಟಿ ಕೋಲ್ನಾಡು ಗುತ್ತು, ಮಂಗಳೂರು ವಿಭಾಗ ಸಂಪರ್ಕ ಪ್ರಮುಖ್ ಮಾಲತಿ ಚಂದ್ರಶೇಖರ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕ ಶಂಕರ್ ಮಾಸ್ಟರ್, ವಿಶ್ವ ಹಿಂದೂ ಪರಿಷತ್ತಿನ ಮೂಲ್ಕಿ ಪ್ರಖಂಡದ ಸಹ ಕಾರ್ಯದರ್ಶಿ ಅಶೋಕ್ ಕೆಮ್ಮಡೆ, ಕಾರ್ಯದರ್ಶಿ ಶಾಮ್ ಸುಂದರ್ ಶೆಟ್ಟಿ, ಕೀರ್ತನ್ ಕೆರೆಕಾಡ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article