
ಕಾಡಾನೆ ದಾಳಿ: ಕೃಷಿಗೆ ಹಾನಿ
Wednesday, October 23, 2024
ಸುಳ್ಯ: ಕಳೆದ ಎರಡು ಮೂರು ದಿನಗಳಿಂದ ಸುಳ್ಯದ ಕಾಯರ್ತೋಡಿ ಪರಿಸರದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಪ್ರತಿನಿತ್ಯ ರಾತ್ರಿ ಪರಿಸರದ ಕೃಷಿಕರ ತೋಟಕ್ಕೆ ನುಗ್ಗಿ ಕೃಷಿ ಹಾನಿ ನಡೆಸುತ್ತಿದೆ. ಹಗಲು ಹೊತ್ತಿನಲ್ಲಿ ಸಮೀಪದ ಪೂಮಲೆ ಕಾಡಿನಲ್ಲಿ, ಇರುವ ಅನೆಗಳು ರಾತ್ರಿ ವೇಳೆ ಕೃಷಿಕರ ತೋಟಕ್ಕೆ ಬಂದು ಕೃಷಿ ಹಾನಿ ನಡೆಸುತ್ತಿದೆ. ವಿಜಯ ಪಡ್ಡುರವರ ತೋಟಕ್ಕೆ ನುಗ್ಗಿ 3 ತೆಂಗಿನ ಗಿಡ ಮತ್ತು ಬಾಳೆ ಕೃಷಿ ನಾಶಪಡಿಸಿದೆ.
ಈ ಭಾಗದಲ್ಲಿ ಹಳದಿ ರೋಗದಿಂದ ಕಂಗೆಟ್ಟಿರುವ ಕೃಷಿಕರು ಅಲ್ಪಸ್ವಲ್ಪ ಬಾಳೆ, ಅಡಿಕೆ, 3 ತೆಂಗು ಇನ್ನಿತರ ಗಿಡಗಳನ್ನು ನೆಟ್ಟು ಜೀವನ ನಡೆಸುತ್ತಿದ್ದು, ಅದನ್ನು ಕಾಡಾನೆಗಳು ಬಂದು ನಾಶಪಡಿಸುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ನಿರ್ಲಕ್ಷ ತೋರಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.