
ಪ್ರಾಣ ರಕ್ಷಿಸಿದ ಪಿಆರ್‌ಎಫ್ ಮಹಿಳಾ ಸಿಬ್ಬಂದಿ ಅಪರ್ಣಾ ಅವರಿಗೆ ಸನ್ಮಾನ
Wednesday, October 2, 2024
ಉಡುಪಿ: ಉಡುಪಿ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳಾ ಪ್ರಯಾಣಿಕರೋರ್ವರನ್ನು ತನ್ನ ಸಮಯಪ್ರಜ್ಞೆಯಿಂದ ತಕ್ಷಣ ರಕ್ಷಿಸಿದ ಪಿಆರ್‌ಎಫ್ ಮಹಿಳಾ ಸಿಬ್ಬಂದಿ ಅಪರ್ಣಾ ಅವರನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಬುಧವಾರ ಗೃಹ ಕಚೇರಿಯಲ್ಲಿ ಸನ್ಮಾನಿಸಿ, ತುರ್ತು ಸಂದರ್ಭದಲ್ಲಿ ಸಮಯೋಚಿತ ಕಾರ್ಯದ ಮೂಲಕ ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಅಪರ್ಣಾ ಅವರಿಗೆ ಅಭಿನಂದನೆ ಸಲ್ಲಿಸಿದರು.