ಸಿಡಿಲು ಬಡಿದು ಬಾಲಕ ಮೃತ್ಯು

ಸಿಡಿಲು ಬಡಿದು ಬಾಲಕ ಮೃತ್ಯು


ಬಂಟ್ವಾಳ: ಭಾನುವಾರ ಸಂಜೆ ಬಂಟ್ವಾಳದಾದ್ಯಂತ ಸಿಡಿಲು,ಮಿಂಚಿನ ಅಬ್ಬರಕ್ಕೆತಾಲೂಕಿನ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಬಾಲಕನೋರ್ವ ಮೃತಪಟ್ಟ ಘಟನೆ  ನಡೆದಿದೆ.

ಗಡಿಯಾರ ನಿವಾಸಿ ಸುಭೋದ್ ಸಿ (14) ಎಂಬ ಬಾಕಲನಿಗೆ ಸಿಡಿಲು ಬಡಿದು ಗಾಯಗೊಂಡಿದ್ದು, ಕೂಡಲೇ ಅತನನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅತನನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮನೆಯಂಗಳದಲ್ಲಿ ನಿಂತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿದೆ. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ಹಠಾತನೇ ಅಬ್ಬರದ ಸಿಡಿಲು ಹಾಗೂ ಮಿಂಚಿನಿಂದ ಒಂದು ಕ್ಷಣ ಜನಸಾಮಾನ್ಯರಲ್ಲಿ ಭಯದ ವಾತಾವರಣವನ್ನುಂಟು ಮಾಡಿತುಜೊತೆಗೆ ಧಾರಕಾರಮಳೆಯು ಸುರಿಯುವ ಮೂಲಕ ಬಿಸಿಲಿನ ಝಳದಿಂದ ತತ್ತರಿಸಿದ ಜನರಿಗೆ ತಂಪನ್ನು ನೀಡಿತು.

ಸಂಜೆಯವರೆಗೂ ಸುಡುಬಿಸಿನಂತಿದ್ದ ವಾತಾವರಣ ಇದ್ದಂತೆ ಸ್ಪಾಕ್೯ ನಂತ ಮಿಂಚು,ಜೊತೆಗೆ ಅಬ್ಬರದ ಸಿಡಿಲು ಹಾಗೂ ಸುಮಾರು ಒಂದು ತಾಸುಗಳ ಕಾಲ ಬಿರುಸಿನ ಮಳೆತು ಸುರಿಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article