ಪುರಸಭೆ ಸದಸ್ಯನಿಂದ ಮರದ ಸೋಂಟೆಯಿಂದ ಹಲ್ಲೆ: ಕೂಲಿ ಕಾರ್ಮಿಕನ ಕಾಲಿನ ಮೂಳೆ ಮುರಿತ
Monday, November 18, 2024
ಕಾರ್ಕಳ: ಮರದ ಸೋಂಟೆಯಿಂದ ಹಲ್ಲೆ ನಡೆಸಿ ಕೂಲಿ ಕಾರ್ಮಿಕನ ಕಾಲಿನ ಮೂಳೆ ಮುರಿದ ಘಟನೆ ಕಾರ್ಕಳ ಬಂಡೀಮಠದಲ್ಲಿ ಭಾನುವಾರ ಸಂಭವಿಸಿದೆ.
ಪುರಸಭೆ ಸದಸ್ಯ ಸೀತಾರಾಮ (60) ಹಲ್ಲೆ ನಡೆಸಿದ ಆರೋಪಿ. ನಿಟ್ಟೆ ಗ್ರಾಮದ ಬೊರ್ಗಲ್‌ಗುಡ್ಡೆ ದಿ. ವೆಂಕ ಮೂಲ್ಯ ಎಂಬವರ ಪುತ್ರ ಮಹಾಬಲ ಮೂಲ್ಯ (55) ಹಲ್ಲೆಗೊಳಗಾಗಿದ್ದಾರೆ. ಇದೀಗ ಆರೋಪಿಯನ್ನು ನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆಗಿದ್ದೇನು?:
ಬಂಡೀಮಠದ ಬಳಿಯಿರುವ ನಂದಿನಿ ಮಿಲ್ಕ್ ಪಾರ್ಲರ್‌ನ ಬಳಿ ಮಹಾಬಲ ಮೂಲ್ಯ ಕುಳಿತಿದ್ದ. ಆರೋಪಿ ಸೀತಾರಾಮ ಅಂಗಡಿ ಕಳ್ಳತನದ ಬಗ್ಗೆ ಜಗಳವಾಡಿದ್ದಾನೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಮರದ ಸೋಂಟೆಯಿಂದ ಮಹಾಬಲ ಮೂಲ್ಯ ಅವರ ಕಾಲಿಗೆ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ಬಲಗಾಲಿನ ಮೂಳೆ ಮುರಿತವಾಗಿದೆ.
ಖಂಡನೆ: ಕುಲಾಲ ಯುವವೇದಿಕೆಯ ವತಿಯಿಂದ ಕುಲಾಲ ಸಮಾಜದ ಮೇಲೆ ನಡೆದಿರುವ ದಬ್ಬಾಳಿಕೆಯನ್ನು ಖಂಡಿಸಿ, ನಗರ ಠಾಣೆಗೆ ದೂರು ನೀಡಲಾಯಿತು. ದೂರು ನಿಡದ ಒಂದೇ ಗಂಟೆಯಲ್ಲಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.