
ಎಡನೀರು ಮಠಕ್ಕೆ ಬಿಜೆಪಿ ನಿಯೋಗ
Friday, November 8, 2024
ಕಾಸರಗೋಡು: ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿ ಅವರನ್ನು ಬಿಜೆಪಿ ನಿಯೋಗ ಭೇಟಿಯಾಗಿ ಇತ್ತೀಚೆಗೆ ನಡೆದ ಅಹಿತಕರ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದು ದಕ್ಷಿಣ ಕನ್ನಡ ಬಿಜೆಪಿ ನಿಮ್ಮೊಂದಿಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬ ಭರವಸೆಯೊಂದಿಗೆ ಆಶೀರ್ವಾದ ಪಡೆಯಲಾಯಿತು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಬಿಜೆಪಿ ಪ್ರಮುಖರಾದ ಸುದಾಮ ಗೋಸಾಡ, ಜಗದೀಶ್ ಆಳ್ವ, ದಯಾನಂದ ತೋಕೊಟ್ಟು, ಮಹೇಶ್ ಜೋಗಿ, ಅವಿನಾಶ್ ಸುವರ್ಣ, ಮುರಳೀಧರ್ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.