ನ.22 ರಂದು ಶ್ರೀ ನವದುರ್ಗಾ ದೇವಿ ಶಾಂತೇರಿ ಕಾಮಾಕ್ಷಿ ದೇವಸ್ಥಾನ ದೀಪೋತ್ಸವ
Tuesday, November 19, 2024
ಕುಂದಾಪುರ: ಇಲ್ಲಿನ ಖಾರ್ವಿಕೇರಿ ರಸ್ತೆಯಲ್ಲಿರುವ ಶ್ರೀ ನವದುರ್ಗಾ ದೇವಿ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ದೀಪೋತ್ಸವವು ನ: 22 ರಂದು ಜರಗಲಿದೆ.
ಅಂದು ಸಂಜೆ 6 ರಿಂದ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ವಿಶೇಷ ಅಲಂಕಾರ ಪೂಜೆ, ದೀಪೋತ್ಸವ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಬಳಿಕ ಲಘು ಉಪಹಾರ ವ್ಯವಸ್ಥೆ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.