
ನ.10 ರಂದು ಭರತನಾಟ್ಯ ರಂಗಪ್ರವೇಶ
Tuesday, November 5, 2024
ಮಂಗಳೂರು: ಭರತನಾಟ್ಯ ಗುರು ರಾಧಿಕಾ ಶೆಟ್ಟಿ ಅವರ ಶಿಷ್ಯೆ, ಮಂಗಳೂರಿನ ವೈದ್ಯರುಗಳಾದ ಡಾ. ಕಿರಣ್ ಕುಮಾರ್ ಬಿ.ಎಸ್-ಡಾ. ಚೈತ್ರಲಕ್ಷ್ಮೀ ದಂಪತಿಯ ಪುತ್ರಿ ಅದಿತಿ ಲಕ್ಷ್ಮೀ ಭಟ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನ.10 ರಂದು ನಡೆಯಲಿದೆ.
ನಗರದ ಡಾನ್ಬಾಸ್ಕೋ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಜರುಗಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ನೃತ್ಯಗುರುಗಳಾದ ರಾಜಶ್ರೀ ಶೆಣೈ, ಶಾರದಾಮಣಿ ಶೇಖರ್ ಹಾಗೂ ಭರತನಾಟ್ಯ ಕಲಾವಿದೆ, ಯೋಗಸಾಧಕಿ ಸ್ವರೂಪ್ ದೇವಯ್ಯ ಅತಿಥಿಗಳಾಗಿ ಭಾಗವಹಿಸುವರು. ನೃತ್ಯಾಸಕ್ತರಿಗೆ ಉಚಿತ ಪ್ರವೇಶ ಎಂದು ನೃತ್ಯಾಂಗನ್ ಸಂಸ್ಥೆ ನಿರ್ದೇಶಕಿ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.