
ಡಿ.7ರಂದು ಮಂಗಳೂರಿನಲ್ಲಿ ವಿದ್ಯಾರ್ಥಿ ರೈತ ರ‍್ಯಾಲಿ
ಮಂಗಳೂರು: ಇಲ್ಲಿನ ಬಿಜೈನಲ್ಲಿಪುವ ಫುಡ್ ಚೈನ್ ಕ್ಯಾಂಪೇನ್ ವತಿಯಿಂದ ಡಿ. 7ರಂದು ಆಹಾರ ಸರಪಳಿ ಅಭಿಯಾನ ಮತ್ತು ವಿದ್ಯಾರ್ಥಿ ರೈತ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತುಮಾಹಿತಿ ನೀಡಿದ ಫುಡ್ ಚೈನ್ ಕ್ಯಾಂಪೇನ್ ಆಯೋಜಕ ಡಾ.ಸೌರೀಶ್ ಹೆಗ್ಡೆ, ವಿದ್ಯಾರ್ಥಿ ರ‍್ಯಾಲಿಯ ಬಳಿಕ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪೂರ್ವಾಹ್ನ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಹೇಳಿದ್ದಾರೆ. ಹಲವು ಮಂದಿ ತಜ್ಞರುಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃಷಿ ಕ್ಷೇತ್ರದಲ್ಲಿನ ಮಹತ್ತರ ಸಾಧನೆ ಮತ್ತು ಬದಲಾವಣೆಗಳ ಕುರಿತಂತೆ ವಿಷಯ ಮಂಡಿಸಲಿದ್ದಾರೆ ಎಂದರು.
ರ‍್ಯಾಲಿಯು ಪುರಭವನದಿಂದ ಆರಂಭಗೊಂಡು ಮಿಲಾಗ್ರಿಸ್ ವರೆಗೆ ತೆರಳಿ ಬಳಿಕ ಪುರಭವನಕ್ಕೆ ಮರಳಲಿದೆ. ಶಾಸಕ ಡಿ.ವೇದವ್ಯಾಸ್ ಕಾಮತ್, ಮೇಯರ್ ಮನೋಜ್ ಕುಮಾರ್, ಡಿಸಿಪಿ ಸಿದ್ದಾರ್ಥ್ ಗೋಯಲ್, ಎಸಿಪಿ ನಝ್ಮಾ ಫಾರೂಕಿ, ಪಾಲಿಕೆ ಸದಸ್ಯ ಮನೋಹರ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೇಳೇರಿ ಹಾಗೂ ಅಮೈ ಮಹಾಲಿಂಗ ನಾಯ್ಕ ಅವರನ್ನು ಗೌರವಿಸಲಾಗುವುದು ಎಂದವರು ತಿಳಿಸಿದರು.
ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ. ಇದರಲ್ಲಿ ನಿತ್ಯ ಸೇವಿಸುವ ಆಹಾರದ ಕುರಿತು ಹಾಗೂ ಕೃಷಿಯ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ವಿಜ್ಞಾನಿ ಡಾ.ರಮೇಶ, ಕೃಷಿ ವಿಜ್ಞಾನಿ ಡಾ.ಮಲ್ಲಿಕಾರ್ಜುನ್, ಪ್ರಮುಖರಾದ ಯತೀಶ್ ತುಕಾರಾಂ ಉಪಸ್ಥಿತರಿದ್ದರು.