
ಪೊಲೀಸ್ ಕಮಿಷನರರ ವರ್ತನೆಗೆ ಸಿಪಿಐ ಖಂಡನೆ
ಮಂಗಳೂರು: ಇತೀಚ್ಚೆಗಿನ ದಿನಗಳಲ್ಲಿ ಶಾಂತಿಯುತ ಪ್ರತಿಭಟನೆಗಳಿಗೆ ಏನೇನೋ ಕಾರಣ ಒಡ್ಡಿ ಮಂಗಳೂರಿನ ಪೊಲೀಸ್ ಕಮಿಷನರೇಟ್ ಅನುಮತಿ ನೀಡುತ್ತಿಲ್ಲ. ಈ ಹಿಂದೆ ಇಂತಹ ಪ್ರವೃತ್ತಿ ಎಂದೂ ಕಂಡಿಲ್ಲ. ವಿಷಮ ಪರಿಸ್ಥಿತಿ ಇದ್ದಲ್ಲಿ ಅನುಮತಿ ನಿರಾಕರಣೆ ಸರಿಯೆ, ಆದರೆ ಅಂತಹ ಪತಿಸ್ಥಿತಿ ಸಧ್ಯಕ್ಕೆ ಇಲ್ಲ.
ನ.4 ರಂದು ಸಮಾನ ಮನಸ್ಕ ಸಂಘಟನೆಗಳು ಪ್ಯಾಲೆಸ್ತಿನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ, ಕದನವಿರಾಮ ಒತ್ತಾಯಿಸಿ ನಾಗರಿಕ ಪ್ರತಿಭಟನೆ ನಡೆಸಲು ಮುಂದಾದಾಗ ಸಕಾರಣವಿಲ್ಲದೆ ಅನುಮತಿ ನಿರಾಕರಿಸಲಾಯ್ತು. ಆದರೂ ಸಂಘಟಕರು ಶಾಂತಿಯುತ ಪ್ರತಿಭಟನೆ ನಡೆಸಿದರು. ಪ್ರತಿಭಟನೆಕಾರರ ವಿರುದ್ಧ ಎಫ್ಐಆರ್ ದಾಖಲಿದೆ.
ನ.26 ರಂದು ರಾಷ್ಟ್ರೀಯ ಹೆದ್ದಾರಿ ದುರಸ್ಥಿ ಆಗ್ರಹಿಸಿ ಕೂಳೂರು ಸೇತುವೆ ಬಳಿ ಧರಣಿ ನಡೆಸಲು ಸಮಾನ ಮನಸ್ಕರು ಮುಂದಾದರು. ಆದರೆ ಅದಕ್ಕೂ ಅನುಮತಿ ನಿರಾಕರಿಸಲಾಯಿತು. ಅದಾಗಿಯೂ ಸಂಘಟಕರು ಶಾಂತಿಯುತ ಧರಣಿ ನಡೆಸಿದರು. ಅವರ ಮೇಲೂ ಎಫ್ಐಆರ್ ದಾಖಲಿಸಲಾಗಿದೆ.
ಸಕಾರಣವಿಲ್ಲದೆ ಅನುಮತಿ ನಿರಾಕರಿಸಿ, ಎಫ್ಐಆರ್ ದಾಖಲಿಸುವ ಪೊಲೀಸ್ ಕಮಿಷನರ ಪ್ರವೃತ್ತಿ ಸಂವಿಧಾನಕ್ಕೆ ವಿರುದ್ಧವಾದುದು. ಇದನ್ನು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಅಥವಾ ಅವರನ್ನು ಕೂಡಲೆ ವರ್ಗಾವಣೆ ಮಾಡಬೇಕು ಎಂದು ಸಿಪಿಐ ರಾಜ್ಯ ಸರಕಾರವನ್ನು ಪ್ರಕಟಣೆಯಲ್ಲಿ ಒತ್ತಾಯಿಸಿದೆ.