
ಕನ್ನಡಕ್ಕೆ ಪ್ರಥಮ ಅದ್ಯತೆ ಇರಲಿ: ಡಿ. ಪದ್ಮಾವತಿ
ಮಂಗಳೂರು: ಭವ್ಯ ಇತಿಹಾಸ, ಪರಂಪರೆ ಹೊಂದಿರುವ ಕನ್ನಡ ಭಾಷೆಗೆ ದೈನಂದಿನ ಆಡಳಿತ ವ್ಯವಹಾರದಲ್ಲಿ ಅದ್ಯತೆ ನೀಡುವ ಮೂಲಕ ಕನ್ನಡಾಂಬೆಯ ಸೇವಾ ಕೈಂಕಯ೯ದಲ್ಲಿ ತೊಡಗಿಸಿಕೊಳ್ಳೋಣ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ಹೇಳಿದರು.
ನಗರದ ಮೆಸ್ಕಾಂ ಕಾಪೊ೯ರೇಟ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ರಾಜ್ಯೋತ್ಸವ ಸ೦ದೇಶ ನೀಡಿದರು.
ಬೇರೆ ಭಾಷೆ ಕಲಿತರೂ, ತಾಯಿ ಭಾಷೆ ಕನ್ನಡವನ್ನು ಮರೆಯಬಾರದು. ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಭಿಮಾನ ಮೂಡಿಸುವ ಕಾಯ೯ವನ್ನು ಹೆತ್ತವರು ಮಾಡಬೇಕಿದೆ. ಕನ್ನಡ ಭಾಷೆಯನ್ನು ಇನ್ನಷ್ಟು ಭಾಷೆ ಎತ್ತರಕ್ಕೆ ಬೆಳೆಯಲು ನಮ್ಮ ಕೊಡುಗೆ ನೀಡಬೇಕಿದೆ ಎಂದರು.
ಮೆಸ್ಕಾಂನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿ೦ದ ಅಚರಿಸಿಕೊ೦ಡು ಬರಲಾಗುತ್ತಿದ್ದು, ಇದಕ್ಕಾಗಿ ಮೆಸ್ಕಾಂ ಬಳಗವನ್ನು ಅಭಿನಂದಿಸುತ್ತೇನೆ ಎಂದವರು ಹೇಳಿದರು.
ಅರ್ಥಿಕ ಅಧಿಕಾರಿಗಳಾದ ಮೌರೀಸ್ ಡಿ’ಸೋಜ, ಮ೦ಗಳೂರು ವಲಯ ಮುಖ್ಯ ಎಂಜಿನಿಯರ್ ರವಿಕಾ೦ತ ಕಾಮತ್, ಪ್ರಧಾನ ವ್ಯವಸ್ಥಾಪಕರಾದ ಉಮೇಶ್, ಕವಿಪ್ರನಿನಿ ಯೂನಿಯನ್‌ಗಳ ಪದಾಧಿಕಾರಿ ಗುರುಮೂತಿ೯ ಮತ್ತಿತರರು ಪಾಲ್ಗೊಂಡಿದ್ದರು.
ಬ್ಯಾಡ್ಮಿಂಟನ್ ಸೀಜನ್-3 ಪಂದ್ಯಾಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಹಾಯಕ ಪ್ರಧಾನ ವ್ಯವಸ್ಥಾಪಕ ನವೀನ್ ಕುಮಾರ್ ಸ್ವಾಗತಿಸಿ, ಸಾವ೯ಜನಿಕ ಸ೦ಪಕ೯ ಅಧಿಕಾರಿ ವಸ೦ತ ಶೆಟ್ಟಿ ನಿರೂಪಿಸಿದರು.