ವಿಟಿಯು ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎಸ್.ಜೆ.ಇ.ಸಿ.ಗೆ ಜಯ
Sunday, November 17, 2024
ಮಂಗಳೂರು: ಇತ್ತೀಚೆಗೆ ನಡೆದ ವಿಟಿಯು ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ (ಎಸ್‌ಜೆಇಸಿ) ವೇಯ್ಟ್ ಲಿಫ್ಟಿಂಗ್ ತಂಡ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಪ್ರಶಸ್ತಿ ಗೆದ್ದುಕೊಟ್ಟಿದೆ.
ನ.12 ರಂದು ಆಳ್ವಾಸ್ ಐಟಿ ಮೂಡುಬಿದಿರೆಯಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ 64 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 46 ಕೆಜಿ ತೂಕವನ್ನು ಕ್ಲೀನ್ ಮತ್ತು ಜರ್ಕ್‌ನಲ್ಲಿ ಮತ್ತು 80 ಕೆಜಿ ಸ್ನ್ಯಾಚ್‌ನಲ್ಲಿ 34 ಕೆಜಿ ಭಾರ ಎತ್ತುವ ಮೂಲಕ ದ್ವಿತೀಯ ವರ್ಷದ ಇಸಿ ವಿದ್ಯಾರ್ಥಿನಿ ಕುಶಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ದೈಹಿಕ ಶಿಕ್ಷಣ ನಿರ್ದೇಶಕಿ (ಪಿಇಡಿ) ವನೀಷಾ ವಿ. ರೋಡ್ರಿಗಸ್ ಮತ್ತು ಸಹಾಯಕ ಪಿಇಡಿ ಸುಧೀರ್ ಎಂ. ಅವರ ಮಾರ್ಗದರ್ಶನದಲ್ಲಿ ಪಡೆದ ಈ ಅಗಾಧ ಸಾಧನೆಗಾಗಿ ಇಡೀ ತಂಡ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಎಸ್.ಜೆ.ಇ.ಸಿ.ಯ ಆಡಳಿತ ಮಂಡಳಿಯು ಅಭಿನಂದಿಸಿದೆ.