ಮೋದಿ ಸರಕಾರ ಅಮೇರಿಕಾ ಸಾಮ್ರಜ್ಯಶಾಹಿಯ ಅಡಿಯಾಳು ಆಗಬಾರದು: ಯಾದವ ಶೆಟ್ಟಿ ಸಿಪಿಐಎಂನ ತಾಲೂಕು ಸಮ್ಮೇಳನದಲ್ಲಿ ಹೇಳಿಕೆ

ಮೋದಿ ಸರಕಾರ ಅಮೇರಿಕಾ ಸಾಮ್ರಜ್ಯಶಾಹಿಯ ಅಡಿಯಾಳು ಆಗಬಾರದು: ಯಾದವ ಶೆಟ್ಟಿ ಸಿಪಿಐಎಂನ ತಾಲೂಕು ಸಮ್ಮೇಳನದಲ್ಲಿ ಹೇಳಿಕೆ


ಮೂಡುಬಿದಿರೆ: ಕೇಂದ್ರದಲ್ಲಿರುವ ನರೇಂದ್ರಸಿಪಿಐಎಂನ ತಾಲೂಕು ಸಮ್ಮೇಳನ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಮೆರಿಕ ಸಾಮ್ರಾಜ್ಯಶಾಹಿಯ ಅಡಿಯಾಳು ಆಗಬಾರದು ಎಂದು ಸಿಪಿಐಎಂನ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ್ ಶೆಟ್ಟಿ ಹೇಳಿದರು.

ಅವರು ಭಾನುವಾರ ಸಮಾಜ ಮಂದಿರದಲ್ಲಿ ನಡೆದ ಸಿಪಿಐಎಂ ಮೂಡುಬಿದಿರೆ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಪ್ಯಾಲೆಸ್ತೀನ್ ನಾಗರಿಕರನ್ನು ಅತ್ಯಂತ ಅಮಾನವೀಯವಾಗಿ ಕೊಲ್ಲುತ್ತಿರುವ ಇಸ್ರೇಲಿಗೆ ಸರ್ವ ರೀತಿಯ ಸಹಕಾರ ನೀಡುತ್ತಿರುವ ಅಮೆರಿಕ ಮತ್ತು ಅದರ ಮಿತ್ರಕೂಟದ ನೀತಿಯನ್ನು ಅವರು ಖಂಡಿಸಿ ಮಾತನಾಡಿದರು. ಭಾರತ ಎಂದಿಗೂ ಸಾಮ್ರಾಜ್ಯ ಶಾಹಿಗಳ ಪರವಾಗಿರಲಿಲ್ಲ 2014ರಲ್ಲಿ ಆಡಳಿತಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರ ದೇಶದ ವಿದೇಶಾಂಗ ನೀತಿಯನ್ನು ಅಮೆರಿಕ ಸಾಮ್ರಾಜ್ಯ ಶಾಹಿಗಳ ಅಡಿಯಲಾಗಿಸಿವೆ ಅದು ಹಾಗೆ ಆಗಬಾರದು ಸರಕಾರದ ನೀತಿ ಬದಲಾಗಬೇಕೆಂದು ಅವರು ಹೇಳಿದರು.

ತಾಲೂಕು ಸಮಿತಿ ಕಾರ್ಯದರ್ಶಿ ರಮಣಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಮುಂದಾಳು ಸುನಿಲ್ ಕುಮಾರ್ ಬಜಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬಲಪಂಥೀಯ ವಿಚಾರಧಾರೆ ಇರುವ ಬಿಜೆಪಿ ಕೇಂದ್ರ ಸರ್ಕಾರ ದೇಶಕ್ಕೆ ಅಪಾಯಕಾರಿಯಾಗಿದೆ. ಪ್ರಧಾನಿ ಸುಳ್ಳುಗಳ ಮುಖಾಂತರ ಆಡಳಿತ ನಡೆಸುತ್ತಿದ್ದಾರೆ ಕಳೆದ ಲೋಕಸಭಾ ಚುನಾವಣೆ ಬಿಜೆಪಿಗೆ ಸರಿಯಾದ ಪಾಠ ಕಲಿಸಿದೆ ಬಹುಮತ ಗಳಿಸಿದಂತೆ ಬೇರೆ ಪಕ್ಷದ ಬೆಂಬಲದೊಂದಿಗೆ ಸರಕಾರ ರಚಿಸುವ ಅನಿವಾರ್ಯತೆಯನ್ನು ಭಾರತದ ಜನತೆ ನೀಡಿದ್ದಾರೆ.

ದೇಶದ ಕಾರ್ಮಿಕ ವರ್ಗ ಹೋರಾಟ ಮಾಡಿ ಗಳಿಸಿದ ಕಾನೂನುಗಳನ್ನು ಬಂಡವಾಳಿಗರ ಪರ ತಿದ್ದುಪಡಿ ಮಾಡುತ್ತಿದೆ ಇದರ ವಿರುದ್ಧ ರೈತರ ವಿರುದ್ಧದ ಕಾನೂನುಗಳ ವಿರುದ್ಧ ಐಕ್ಯ ಹೋರಾಟ ಜೀವಂತವಾಗಿ ಮುಂದುವರಿದಿದೆ. ಸಿಪಿಐಎಂ ಪಕ್ಷ ಮುಂಚೂಣಿ ನಾಯಕತ್ವ ನೀಡಲಿದೆ ಎಂದು ಅವರು ಹೇಳಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ವಸಂತ ಆಚಾರ್ಯ, ತಾಲೂಕು ಸಮಿತಿ ಸದಸ್ಯರಾದ ಸುಂದರ ಶೆಟ್ಟಿ ರಾಧಾ ಗಿರಿಜಾ ಲಕ್ಷ್ಮಿ ಮೊಹಮ್ಮದ್ ತಸ್ರೀಫ್, ಸೀತಾರಾಮ್ ಶೆಟ್ಟಿ ಶಂಕರ್ ಕೃಷ್ಣಪ್ಪ ಕೊಣಾಜೆ ಉಪಸ್ಥಿತರಿದ್ದರು.

ರಾಧಾ ಅವರು ಸ್ವಾಗತಿಸಿ, ಮಹಮ್ಮದ್ ತಸ್ರೀಫ್ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article