ಮೂಡುಮಾರ್ನಾಡಿನ ಅಸಹಾಯಕ ಕುಟುಂಬಕ್ಕೆ ‘ತ್ರಿಶೂಲ್ ನಿಲಯ’ ಹಸ್ತಾಂತರ

ಮೂಡುಮಾರ್ನಾಡಿನ ಅಸಹಾಯಕ ಕುಟುಂಬಕ್ಕೆ ‘ತ್ರಿಶೂಲ್ ನಿಲಯ’ ಹಸ್ತಾಂತರ


ಮೂಡುಬಿದಿರೆ: ಅಸಹಾಯಕರ ಕಣ್ಣೀರು ಒರೆಸಬೇಕೆಂಬ ಉದ್ದೇಶದಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ಅಸ್ವಿತ್ವಕ್ಕೆ ಬಂದಿರುವ ತ್ರಿಶೂಲ್ ಫ್ರೆಂಡ್ಸ್ ಬೆದ್ರ (ರಿ) ಇದರ ವತಿಯಿಂದ ಮೂಡುಮಾರ್ನಾಡಿನ ತಂಡ್ರಕರೆ ಎಂಬಲ್ಲಿ ಅಸಹಾಯಕ ಕುಟುಂಬಕ್ಕೆ ನಿರ್ಮಿಸಿರುವ ಸೂರು ‘ತ್ರಿಶೂಲ್ ನಿಲಯ’ವನ್ನು ಭಾನುವಾರ ಹಸ್ತಾಂತರಿಸಲಾಯಿತು.

ಸಮಾಜ ಸೇವಕಿ ರಜನಿ ಶೆಟ್ಟಿ ಅವರು ಸಂಘಟನೆಯ ಯುವಕರ ಜತೆಗೂಡಿ ‘ತ್ರಿಶೂಲ್ ನಿಲಯ’ದ ನಾಮಫಲಕವನ್ನು ಅನಾವರಣಗೊಳಿಸಿ ಕೀಯನ್ನು ಮನೆಯ ಯಜಮಾನ ಸುಂದರ ಅವರ ಕುಟುಂಬಕ್ಕೆ ಹಸ್ತಾಂತರಿಸಿ ಮಾತನಾಡಿ, ಸಂಘಟನೆಯಿಂದ ಇನ್ನಷ್ಟು ಉತ್ತಮ ಸಮಾಜ ಸೇವೆಯನ್ನು ಮಾಡುವಂತ್ತಾಗಲಿ ಉತ್ತಮ ಯೋಜನೆಗಳಿಗೆ ಭಗವಂತನ ಅನುಗ್ರಹವಿರಲೆಂದು ಹಾರೈಸಿದರು.

ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯ ಗೌರವಾಧ್ಯಕ್ಷ ಅಶ್ವಥ್ ಪಣಪಿಲ ಮಾತನಾಡಿ, ರಸ್ತೆಯಿಂದ ಬಹಳ ದೂರದ ಗುಡ್ಡ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮನೆಯ ಕಾಮಗಾರಿಯ ಸಂದರ್ಭದಲ್ಲಿ ಸಂಘಟನೆಯ ಯುವಕರು ನಿರಂತರವಾಗಿ ದೂರದಿಂದ ಕಲ್ಲು ಮಣ್ಣುಗಳನ್ನು ಹೊತ್ತುಕೊಂಡು ಕಷ್ಟಪಟ್ಟು ಕೆಲಸ ಮಾಡಿ ಈ ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಡುವ ಮೂಲಕ ಇವರ ಈ ಕೆಲಸ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.

ತ್ರಿಶೂಲ್ ಫ್ರೆಂಡ್ ಸಂಘಟನೆಯ ಅಧ್ಯಕ್ಷ ರಕ್ಷಿತ್ ಮಾತನಾಡಿ, 30 ಜನ ಯುವಕರನ್ನು ಒಳಗೊಂಡಿರುವ ಈ ಸಂಘಟನೆಯು ಇದುವರೆಗೆ ವೈದ್ಯಕೀಯ ಸೇವೆ ಹಾಗೂ ಇನ್ನಿತರ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದು ಇದೀಗ ಮೊದಲ ಬಾರಿಗೆ ಒಂದು ಬಡ ಕುಟುಂಬಕ್ಕೆ ಸೂರನ್ನು ಒದಗಿಸುವ ಕೆಲಸವನ್ನು ಮಾಡಿದೆ. ಮುಂದಿನ ದಿನಗಳಲ್ಲೂ ಇಂತಹ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಂಘಟನೆಯು ನಿರಂತರವಾಗಿ ಸಕ್ರಿಯರಾಗಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.

ಮನೆಯ ಯಜಮಾನ ಸುಂದರ ಅವರು ಮಾತನಾಡಿ, ಸಂಘಟನೆಯ ಯುವಕರು ಕಷ್ಟಪಟ್ಟು ದೂರದಿಂದ ಕಲ್ಲು ಮಣ್ಣುಗಳನ್ನು ತಂದು ನಮಗೆ ಸೂರನ್ನು ನಿರ್ಮಿಸಿ ಕೊಟ್ಟು ನಮ್ಮ ಕುಟುಂಬದ ಕಷ್ಟಕ್ಕೆ ನೆರವಾಗಿದ್ದಾರೆ ಎಂದ ಅವರು ಯುವಕರಿಗೆ ಕೃತಜ್ಞತೆಯನ್ನು ತಿಳಿಸಿದರು.

ಮನೆಯ ಪೈಂಟಿಂಗ್ ಮಾಡುವಲ್ಲಿ ಸಹಕರಿಸಿದ ಆಸಿಫ್ ಒಂಟಿಕಟ್ಟೆ ಮತ್ತು ದಾನಿಗಳನ್ನು ಗೌರವಿಸಲಾಯಿತು.

ಸಂದೀಪ್ ಕೆಲ್ಲಪುತ್ತಿಗೆ, ತ್ರಿಶೂಲ್ ಫ್ರೆಂಡ್ಸ್‌ನ ಸಲಹೆಗಾರ ಸೋಮಶೇಖರ್ ಹಾಗೂ ಸಂಘಟನೆಯ ಸದಸ್ಯರುಗಳು ಉಪಸ್ಥಿತರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article