
ಕಂಚಿ ಶ್ರೀಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ
Thursday, November 7, 2024
ಉಜಿರೆ: ಕಂಚಿ ಕಾಮಕೋಟಿ ಪೀಠಾಧಿಪತಿ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರು ನ.9ರಂದು ಸಂಜೆ 6ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪುರಪ್ರವೇಶ ಮಾಡಲಿದ್ದಾರೆ. ಮಹಾದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ತಲುಪಿ ಭಕ್ತರೆಲ್ಲರಿಗೂ ಅನುಗ್ರಹ ಭಾಷಣವನ್ನು ಮಾಡಲಿದ್ದಾರೆ. ನ.9 ರಿಂದ 16ರ ತನಕ ಕ್ಷೇತ್ರದಲ್ಲಿ ಮೊಕ್ಕಾಂ ಮಾಡಲಿದ್ದಾರೆ.
ನ. 14ರಂದು ಸಂಜೆ 5ಕ್ಕೆ ಅನ್ನಪೂರ್ಣದ ಮೇಲಂತಸ್ತಿನಲ್ಲಿ ನೂತನವಾಗಿ ನಿರ್ಮಿಸಿದರುವ ಭೋಜನಾಲಯವನ್ನು ಸ್ವಾಮೀಜಿಯವರು ಉದ್ಘಾಟಿಸಲಿರುವರು. ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.