
ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಗೆ ಹಲ್ಲೆ
Tuesday, November 5, 2024
ಉಳ್ಳಾಲ: ಉಳ್ಳಾಲ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸೋಮೇಶ್ವರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಕಿಶೋರ್ ಎಂ. ಉಚ್ಚಿಲ (52) ಎಂದು ಗುರುತಿಸಲಾಗಿದೆ. ಸುನಿಲ್ ಪೂಜಾರಿ ಯಾನೆ ಜುಟ್ಟು ಹಲ್ಲೆ ಗೈದ ಆರೋಪಿ.
ಕಿಶೋರ್ ಅವರು ತನ್ನ ಸ್ನೇಹಿತನ ಜೊತೆ ಸೋಮೇಶ್ವರದಲ್ಲಿರುವ ಹೋಟೆಲ್‌ನಲ್ಲಿ ಚಾ ಕುಡಿದು ಸ್ಕೂಟರ್‌ನಲ್ಲಿ ಸೋಮೇಶ್ವರ ಪಂಚಾಯತ್ ರಸ್ತೆಯಾಗಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹಳೆ ದ್ವೇಷವೇ ಈ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಿಶೋರ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.