ಮೂವರಿಗೂ ಈಜು ಬರುತ್ತಿರಲಿಲ್ಲ ಹಾಗಾಗಿ ಸಾವು ಸಂಭವಿಸಿದೆ: ಪೊಲೀಸ್ ಕಮಿಷನರ್
Sunday, November 17, 2024
ಉಳ್ಳಾಲ: ಈಜುಕೊಳದಲ್ಲಿ ದುರಂತ ಸಂಭವಿಸಿದ್ದನ್ನು ತಿಳಿದು ಸ್ಥಳಕ್ಕಾಗಮಿಸಿದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಬೆಳಗ್ಗೆ ಹತ್ತು ಗಂಟೆಗೆ ಮೂವರು ಈಜು ಕೊಳಕ್ಕೆ ಇಳಿದಿದ್ದಾರೆ, ಒಬ್ಬಳು ಯುವತಿ ಆಳ ಇರುವಲ್ಲಿ ಹೋಗಿ ಸಿಲುಕಿಕೊಂಡಿದ್ದಳು. ಇನ್ನಿಬ್ಬರು ಯುವತಿಯರು ಆಕೆಯ ರಕ್ಷಣೆಗೆ ಧಾವಿಸಿದ್ದು, ಮೂವರೂ ಮುಳುಗಿದ್ದಾರೆ. ಮೂವರಿಗೂ ಈಜು ಬರುತ್ತಿರಲಿಲ್ಲ. ಹೀಗಾಗಿ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಮೂವರು ಯುವತಿಯರು ಕೂಡ ಮೈಸೂರಿನಲ್ಲಿ ಒಂದೇ ಕಾಲೇಜಿನಲ್ಲಿ ಅಂತಿಮ ಪದವಿ ಓದುತ್ತಿದ್ದರು. ಸ್ನೇಹಿತೆಯರಾಗಿದ್ದು, ಪ್ರವಾಸ ಬಂದಿದ್ದರು. ಬೊಬ್ಬೆ ಹೊಡೆದು ಕೂಗಾಡಿದರೂ ಯಾರೂ ರಕ್ಷಣೆಗೆ ಬರಲಿಲ್ಲ ಎನ್ನುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ರೆಸಾರ್ಟಿನಲ್ಲಿ ಲೈಫ್ ಗಾರ್ಡ್ ಇರಲಿಲ್ಲ. ಆಳ ಎಷ್ಟಿದೆಯಂಬ ಬಗ್ಗೆಯೂ ಮಾಹಿತಿ ಫಲಕ ಅಳವಡಿಸಿಲ್ಲ. ಮನೆಯವರಿಗೆ ಮಾಹಿತಿ ನೀಡಿದ್ದೇವೆ. ರೆಸಾರ್ಟಿನಲ್ಲಿ ಪಾಲಿಸಬೇಕಾದ ನಿಯಮಗಳನ್ನು ಪಾಲನೆ ಮಾಡಿಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಕಮಿಷನರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.