ಆನ್‌ಲೈನ್‌ನಲ್ಲಿ ಟ್ರೇಡಿಂಗ್: 42,42,764 ರೂ. ಖೋತಾ
Wednesday, December 18, 2024
ಬಂಟ್ವಾಳ: ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಮಾಡಲು ಹೋಗಿ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ವ್ಯಕ್ತಿಯೋರ್ವರು 42,42,764 ರೂ. ಹಣವನ್ನು ಕಳೆದುಕೊಂಡಿರುವ ಕುರಿತಂತೆ ಮಂಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕಳ್ಳಿಗೆ ಗ್ರಾಮದವಿರಾಜೆ ನಿವಾಸಿ ಗಿಲ್ಬರ್ಟ್ ಡಿ’ಸೋಜಾ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕಳೆದ ಮಾ.13 ರಂದು ಲಕ್ಷ್ಮೀ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯು ಕರೆ ಮಾಡಿ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದ್ದು, ಅದರಂತೆ ಟೆಲಿಗ್ರಾಂ ಲಿಂಕ್ ಮುಖಾಂತರ 10 ಸಾ.ರೂ. ಪಾವತಿಸಿದ್ದರು.
ಆ ಬಳಿಕ ಟ್ರೇಡಿಂಗ್ ಮಾಡುವ ಬಗ್ಗೆ ಹೆಚ್ಚಿನ ಹಣವನ್ನು ಪಾವತಿಸುವಂತೆ ತಿಳಿಸಿದ ಹಿನ್ನಲೆಯಲ್ಲಿ ಗಿಲ್ಬಟ್೯ ಅವರು ಹಂತ, ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದು, ಪರಿಣಾಮ ಸುಮಾರು 42,42,764 ರೂ. ಹಣ ಕಳೆದುಕೊಂಡಿದ್ದಾರೆ ಎಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.